
ಹೊಸದಿಲ್ಲಿ: ಟರ್ಕಿ ಪ್ರವಾಸದಲ್ಲಿರುವ ಭಾರತದ 16 ವರ್ಷದೊಳಗಿನವರ ಫುಟ್ಬಾಲ್ ತಂಡ, ಬೆಸಿಕ್ಟಾಸ್ ತಂಡವನ್ನು 5-1 ಗೋಲುಗಳಿಂದ ಸೋಲಿಸಿದೆ. ವಿಕ್ರಮ್ ಪ್ರತಾಪ್ ಸಿಂಗ್ (3, 40, 52ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದಾರೆ. ಭಾರತ ಪರ ದಾಖಲಾದ ಉಳಿದೆರಡು ಗೋಲುಗಳನ್ನು 81ನೇ ನಿಮಿಷದಲ್ಲಿ ರೋಹಿತ್ ದಾನು ಮತ್ತು 87ನೇ ನಿಮಿಷದಲ್ಲಿ ಭುವನೇಶ್ ಬಾರಿಸಿದರು.