U-19 ಕ್ರಿಕೆಟ್: ಏಷ್ಯಾಕಪ್‌ಗೆ ದೇವದತ್, ಭಾರತ ‘ಬಿ’ ತಂಡಕ್ಕೆ ಶುಭಾಂಗ್ ಹೆಗ್ಡೆ

0

ಬೆಂಗಳೂರು, ಆಗಸ್ಟ್ 28: 19 ವರ್ಷದೊಳಗಿನವರ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತದ ಕಿರಿಯರ ತಂಡದಲ್ಲಿ ಕರ್ನಾಟಕದ ಯುವ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಸ್ಥಾನ ಪಡೆದಿದ್ದಾರೆ. ಅಲ್ಲದೆ ಭಾರತ ‘ಎ’, ಭಾರತ ‘ಬಿ’, ಅಫ್ಘಾನಿಸ್ತಾನ ‘ಎ’ ಹಾಗೂ ನೇಪಾಳ ‘ಎ’ ತಂಡಗಳನ್ನೊಳಗೊಂಡ ಚತುಷ್ಕೋನ ಏಕದಿನ ಸರಣಿಗೆ ಭಾರತ ‘ಬಿ’ ತಂಡದಲ್ಲಿ ಕರ್ನಾಟಕದ ಯುವ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ ಸ್ಥಾನ ಪಡೆದಿದ್ದಾರೆ.
ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ 29ರಿಂದ ಢಾಕಾದಲ್ಲಿ ನಡೆಯಲಿದ್ದರೆ, ಚತುಷ್ಕೋನ ಸರಣಿ ಸೆಪ್ಟೆಂಬರ್ 12ರಿಂದ 18ರವೆರೆಗೆ ಲಖನೌದಲ್ಲಿ ನಡೆಯಲಿದೆ.

ದೇವದತ್ ಪಡಿಕಲ್

ಏಷ್ಯಾ ಕಪ್‌ಗೆ ಭಾರತ 19 ವರ್ಷದೊಳಗಿನವರ ತಂಡ
ಪವನ್ ಶಾ(ನಾಯಕ), ದೇವದತ್ ಪಡಿಕಲ್, ಯಶಸ್ವಿ ಜೈಸ್ವಾಲ್, ಅನುಜ್ ರಾವತ್(ವಿಕೆಟ್ ಕೀಪರ್), ಯಶ್ ರಾಥೋಡ್, ಆಯುಷ್ ಬಡೋನಿ, ನೇಹಲ್ ವಧೇರಾ, ಪ್ರಬ್ ಸಿಮ್ರಾನ್ ಸಿಂಗ್(ವಿಕೆಟ್ ಕೀಪರ್), ಸಿದ್ಧಾಂತ್ ದೇಸಾಯಿ, ಹರ್ಷ್ ತ್ಯಾಗಿ, ಅಜಯ್ ದೇವ್ ಗೌಡ್, ಯತಿನ್ ಮಂಗ್ವಾನಿ, ಮೋಹಿತ್ ಜಂಗ್ರಾ, ಸಮೀರ್ ಚೌ‘ರಿ, ರಾಜೇಶ್ ಮೊಹಾಂತಿ.

 

ಚತುಷ್ಕೋನ ಸರಣಿಗೆ ಭಾರತದ 19 ವರ್ಷದೊಳಗಿನವರ ತಂಡಗಳು
ಭಾರತ ‘ಎ’ ತಂಡ: ಪವನ್ ಶಾ(ನಾಯಕ), ದೇವದತ್ ಪಡಿಕಲ್, ಯಶಸ್ವಿ ಜೈಸ್ವಾಲ್, ಅನುಜ್ ರಾವತ್(ವಿಕೆಟ್ ಕೀಪರ್), ಪ್ರಬ್ ಸಿಮ್ರಾನ್ ಸಿಂಗ್(ವಿಕೆಟ್ ಕೀಪರ್), ಯಶ್ ರಾಥೋಡ್, ಆಯುಶ್ ಬಡೋನಿ, ನೇಹಲ್ ವಧೇರ, ಸಿದ್ಧಾರ್ಥ್ ದೇಸಾಯಿ, ಹರ್ಷ್ ತ್ಯಾಗಿ, ಅಜಯ್ ದೇವ್ ಗೌಡ್, ಯತಿನ್ ಮಂಗ್ವಾನಿ, ಮೋಹಿತ್ ಜಂಗ್ರಾ, ಸಮೀರ್ ಚೌಧರಿ, ರಾಜೇಶ್ ಮೊಹಾಂತಿ.

ಶುಭಾಂಗ್ ಹೆಗ್ಡೆ

ಭಾರತ ‘ಬಿ’ ತಂಡ: ವೇದಾಂತ್ ಮುರ್ಕರ್(ನಾಯಕ, ವಿಕೆಟ್ ಕೀಪರ್), ಠಾಕೂರ್ ತಿಲಕ್ ವರ್ಮಾ, ಖಮ್ರಾನ್ ಇಕ್ಬಾಲ್, ವಂಶಿ ಕೃಷ್ಣ, ಪ್ರದೋಶ್ ರಂಜನ್ ಪಾಲ್, ರಿಷಭ್ ಚೌಹಾಣ್, ಸಿದ್ಧಾಂತ್ ರಾಣಾ, ಸಯಾನ್ ಕುಮಾರ್ ಬಿಸ್ವಾಸ್(ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ರಿಜ್ವಿ ಸಮೀರ್, ಪಂಕಜ್ ಯಾದದ್, ಆಕಾಶ್ ಸಿಂಗ್, ಅಶೋಕ್ ಸಂಧು, ಆಯುಷ್ ಸಿಂಗ್, ನಿತೀಶ್ ರೆಡ್ಡಿ, ಶಬ್ಬೀರ್ ಖಾನ್, ಸಾಹಿಲ್ ರಾಜ್, ರಾಜ್‌ವರ್ಧನ್ ಹಂಗಾರ್ಗೆಕರ್.

LEAVE A REPLY

Please enter your comment!
Please enter your name here

fifteen − 7 =