ಅಂಡರ್ 19 ಫುಟ್ಬಾಲ್: ಚತುಷ್ಕೋನ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡ

0

ಹೊಸದಿಲ್ಲಿ, ಸೆಪ್ಟೆಂಬರ್ 2: ಭಾರತದ 19 ವರ್ಷದೊಳಗಿನವರ ಫುಟ್ಬಾಲ್ ತಂಡ, ಫ್ರಾನ್ಸ್, ಕ್ರೊಯೇಷ್ಯಾ ಹಾಗೂ ಸ್ಲೊವೇನಿಯಾ ತಂಡಗಳನ್ನೊಳಗೊಂಡ ಚತುಷ್ಕೋನ ಟೂರ್ನಿಯಲ್ಲಿ ಆಡಲಿದ್ದು, ಈ ಪಂದ್ಯಗಳು ಸೆಪ್ಟೆಂಬರ್ 4ರಿಂದ 9ರವೆರೆಗೆ ನಡೆಯಲಿವೆ.
ಈ ಟೂರ್ನಿಯನ್ನು ಸ್ಲೊವೇನಿಯಾ ಫುಟ್ಬಾಲ್ ಫೆಡರೇಷನ್‌ನ ಸಹಯೋಗದೊಂದಿಗೆ ಕ್ರೊಯೇಷ್ಯಾ ಫುಟ್ಬಾಲ್ ಫೆಡರೇಷನ್ ಆಯೋಜಿಸುತ್ತಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಕಾರದೊಂದಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಈ ಪ್ರವಾಸವನ್ನು ಆಯೋಜಿಸಿದೆ. ಮುಂದಿನ ವರ್ಷ ನಡೆಯುವ ಅಂಡರ್-19 ಎಎಫ್‌ಸಿ ಚಾಂಪಿಯನ್‌ಷಿಪ್ ಅರ್ಹತಾ ಟೂರ್ನಿ ಮತ್ತು ಹೀರೊ ಐ-ಲೀಗ್ ಟೂರ್ನಿಗೆ ಸಿದ್ಧತೆ ನಡೆಸಲು 19 ವರ್ಷದೊಳಗಿನವರ ಹುಡುಗರಿಗೆ ಈ ಪ್ರವಾಸ ನೆರವಾಗಲಿದೆ.

LEAVE A REPLY

Please enter your comment!
Please enter your name here

10 − 3 =