ಅಂಡರ್-19 ಫುಟ್ಬಾಲ್: ಫ್ರಾನ್ಸ್ ವಿರುದ್ಧ ಭಾರತಕ್ಕೆ ಸೋಲು

0

ಹೊಸದಿಲ್ಲಿ, ಸೆಪ್ಟೆಂಬರ್ 10: ಭಾರತದ 19 ವರ್ಷದೊಳಗಿನವರ ತಂಡ ಕ್ರೊಯೇಷ್ಯಾದ ಜಗ್ರೆಬ್‌ನಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಫುಟ್ಬಾಲ್ ಟೂರ್ನಿಯಲ್ಲಿ ಫ್ರಾನ್ಸ್ ವಿರುದ್ಧ 0-2 ಗೋಲುಗಳ ಅಂತರದಲ್ಲಿ ಸೋಲುಂಡಿದೆ.
ಭಾರತದ ಗೋಲ್‌ಕೀಪರ್ ಪ್ರಭುಸುಖನ್ ಗಿಲ್ 8ನೇ ನಿಮಿಷದಲ್ಲಿ ಫ್ರಾನ್ಸ್‌ಗೆ ಗೋಲು ನಿರಾಕರಿಸಿದರು. 34ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಅವಕಾಶವಿತ್ತು. ಆದರೆ ಅನಿಕೇತ್ ಜಾಧವ್ ಆ ಅವಕಾಶವನ್ನು ಕೈಚೆಲ್ಲಿದರು. 44ನೇ ನಿಮಿಷದಲ್ಲಿ ಗೋಲು ಗಳಿಸಿದ ಫ್ರಾನ್ಸ್ 1-0 ಮುನ್ನಡೆ ಗಳಿಸಿದೆ. 73ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಫ್ರಾನ್ಸ್ ತಂಡ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡು ಗೆಲುವು ತನ್ನದಾಗಿಸಿಕೊಂಡಿತು.

LEAVE A REPLY

Please enter your comment!
Please enter your name here

three − 3 =