ಅಂಡರ್-20 ಫುಟ್ಬಾಲ್ : ಲೀಚಾರ್ಡ್ ವಿರುದ್ಧ ಭಾರತಕ್ಕೆ 3-1 ಅಂತರದ ಜಯ

0
India players strike a pose. PC: AIFF

ಹೊಸದಿಲ್ಲಿ: ಪ್ರಥಮಾರ್ಧದಲ್ಲಿ ಸಾಜಿದ್ ಧಾಟ್ ಹಾಗೂ ದ್ವಿತೀಯಾರ್ಧದಲ್ಲಿ ಸುಮೀತ್ ಪಾಸ್ಸಿ ಗಳಿಸಿದ ಗೋಲುಗಳ ನೆರವಿನಿಂದದ ಭಾರತ ತಂಡ, ಸಿಡ್ನಿಯಲ್ಲಿ ಶನಿವಾರ ನಡೆದ ಎಪಿಐಎ ಲೀಚಾರ್ಡ್ ಟೈಗರ್ಸ್ ಎ್ಸಿ ವಿರುದ್ಧದ 20 ವರ್ಷದೊಳಗಿನವರ ಸೌಹಾರ್ದ ಪಂದ್ಯದಲ್ಲಿ 3-1 ಗೋಲುಗಳಿಂದ ಗೆಲುವು ದಾಖಲಿಸಿದೆ.
27ನೇ ನಿಮಿಷದಲ್ಲಿ ಲೀಚಾರ್ಡ್ ಹುಡುಗರು ಗೋಲು ಗಳಿಸಿ 1-0 ಮುನ್ನಡೆ ಗಳಿಸಿದ ನಂತರ ತಿರುಗೇಟು ನೀಡಿದ ಭಾರತ ತಂಡದ ಪರ ಸಾಜಿದ್ ಧಾಟ್ (35ನೇ ನಿಮಿಷ) ಗೋಲು ಗಳಿಸಿ 1-1ರ ಸಮಬಲಕ್ಕೆ ಕಾರಣರಾದರು. ನಂತರ ದ್ವಿತೀಯಾರ್ಧದಲ್ಲಿ ಸುಮೀಸ್ ಪಾಸ್ಸಿ (47, 57ನೇ ನಿಮಿಷ) ಎರಡು ಗೋಲು ಗಳಿಸಿ ಭಾರತದ ಗೆಲುವಿಗೆ ಕಾರಣರಾದರು.

LEAVE A REPLY

Please enter your comment!
Please enter your name here

4 × four =