ಅಡಿಲೇಡ್ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವಿನತ್ತ ಭಾರತ ದಾಪುಗಾಲು

0

ಅಡಿಲೇಡ್, ಡಿಸೆಂಬರ್ 9: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ತನ್ನ ಪಾರಮ್ಯ ಮುಂದುವರಿಸಿರುಲ ಪ್ರವಾಸಿ ಭಾರತ ತಂಡ ಆಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವಿನತ್ತ ದಾಪುಗಾಲು ಹಾಕಿದೆ.

ಗೆಲ್ಲಲು 323 ರನ್ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ 4ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಪಂದ್ಯದ ಅಂತಿಮ ದಿನವಾದ ಸೋಮವಾರ ಭಾರತದ ಗೆಲುವಿಗೆ 6 ವಿಕೆಟ್ಸ್ ಬೇಕಾಗಿದ್ದು, ಆಸ್ಟ್ರೇಲಿಯಾ ಗೆಲ್ಲಬೇಕಾದರೆ ಇನ್ನೂ 237 ರನ್ ಗಳಿಸಬೇಕಿದೆ. ಶಾನ್ ಮಾರ್ಷ್ (24*) ಮತ್ತು ಟ್ರಾವಿಸ್ ಹೆಡ್ (0*) 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಕಠಿಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(2/43) ಮತ್ತು ವೇಗಿ ಮೊಹಮ್ಮದ್ ಶಮಿ(2/9) ದಾಳಿಗೆ ಕುಸಿಯಿತು. ಆ್ಯರೋನ್ ಫಿಂಚ್(11) ವಿಕೆಟ್ ಪಡೆದ ಅಶ್ವಿನ್ ಭಾರತಕ್ಕೆ ಮೊದಲ ಯಶಸ್ಸು ತಂದರೆ, ಮಾರ್ಕಸ್ ಹ್ಯಾರಿಸ್(26) ಶಮಿ ದಾಳಿಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಕ್ಯಾಚಿತ್ತರು. ನಂತರ ಅಶ್ವಿನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಉಸ್ಮಾನೇ ಖವಾಜ(8) ಲಾಂಗ್ ಆಫ್ ವಿಭಾಗದಲ್ಲಿ ರೋಹಿತ್ ಶರ್ಮಾ ಹಿಡಿದ ಉತ್ತಮ ಕ್ಯಾಚ್ ಗೆ ಬಲಿಯಾದರು. ದಿನದಾಟ ಕೊನೆಗೊಳ್ಳು ಕೆಲವೇ ನಿಮಿಷಗಳು ಬಾಕಿ ಇರುವಾಗ ಪೀಟರ್ ಹ್ಯಾಂಡ್ಸ್ ಕಾಂಬ್(14) ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಭಾರತದ ಮೇಲುಗೈಗೆ ಕಾರಣರಾದರು.

PC: BCCI

ಇದಕ್ಕೂ ಮೊದಲು 3 ವಿಕೆಟ್ ನಷ್ಟಕ್ಕೆ 151 ರನ್ ಗಳಿಂದ ದಿನದಾಟ ಮುಂದುವರಿಸಿದ ಟೀಮ್ ಇಂಡಿಯಾ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 307 ರನ್ ಗಳಿಗೆ ಆಲೌಟಾಯಿತು. 3ನೇ ದಿನದಂತ್ಯಕ್ಕೆ 40 ರನ್ ಗಳಿಸಿದ್ದ ಚೇತೇಶ್ವರಾ ಪೂಜಾರ 71 ರನ್ ಗಳಿಸಿ ಔಟಾದರೆ, 1 ರನ್ ಗಳಿಸಿ ಅಜೇಯರಾಗುಳಿದಿದ್ದ ಉಪನಾಯಕ ಅಜಿಂಕ್ಯ ರಹಾನೆ ಆಕರ್ಷಕ 70 ರನ್ ಕಲೆಹಾಕಿದರು. ಪೂಜಾರ ಮತ್ತು ರಹಾನೆ 4ನೇ ವಿಕೆಟ್ ಗೊ ಅತ್ಯಮೂಲ್ಯ 87 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

PC:BCCI

ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಇದುವರೆಗೆ 45 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ ಐದು ಬಾರಿ ಗೆದ್ದಿದೆ. 28 ಸೋಲು ಕಂಡಿದೆ. 11 ಪಂದ್ಯಗಳು ಡ್ರಾಗೊಂಡಿವೆ. ಅಡಿಲೇಡ್ ನಲ್ಲಿ ಆಡಿರುವ 7 ಟೆಸ್ಟ್ ಪಂದ್ಯಗಳಲ್ಲಿ ಒಮ್ಮೆ ಮಾತ್ರ ಗೆದ್ದಿದೆ.

Brief scores 

India: 250 & 307 in 106.5 overs (KL Rahul 44, Cheteshwar Pujara 71, Virat Kohli 34, Ajinkya Rahane 70; Nathan Lyon 6/122, Mitchel Starc 3/40).

Australia: 235 & 86/4 in 38.5 overs (Marcus Harris 26, Shaun Marsh 24 not out; R Ashwin 2/43, Mohammed Shami 2/9).

LEAVE A REPLY

Please enter your comment!
Please enter your name here

10 − 5 =