ಅಡಿಲೇಡ್ ಟೆಸ್ಟ್: ಚೇತೇಶ್ವರ್ ಪೂಜಾರ ಏಕಾಂಗಿ ಶತಕದ ಹೋರಾಟ, ಭಾರತ 250/9

0

ಅಡಿಲೇಡ್, ಡಿಸೆಂಬರ್ 6: ಪ್ರಮುಖ ಬ್ಯಾಟ್ಸ್ ಮನ್ ಗಳ ವೈಫಲ್ಯದ ನಡುವೆ ಚೇತೇಶ್ವರ್ ಪೂಜಾರ ಏಕಾಂಗಿ ಹೋರಾಟ ನಡೆಸಿ ಅಮೋಘ ಶತಕ ಬಾರಿಸುವ ಮೂಲಕ ಅಡಿಲೇಡ್ ಟೆಸ್ಟ್ ನಲ್ಲಿ ಭಾರತಕ್ಕೆ ಆಸರೆಯಾಗಿದ್ದಾರೆ.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಓವಲ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪ್ರಥಮ ಟೆಸ್ಟ್ ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್ ರಾಹುಲ್ (2) ಮತ್ತು ಮುರಳಿ ವಿಜಯ್ (11), ನಾಯಕ ವಿರಾಟ್ ಕೊಹ್ಲಿ (3), ಉಪನಾಯಕ ಅಜಿಂಕ್ಯ ರಹಾನೆ (13) ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಔಟಾದರು. 6ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ರೋಹಿತ್ ಶರ್ಮಾ 3 ಸಿಕ್ಸರ್ಸ್ ನೆರವಿನಿಂದ 37 ರನ್ ಗಳಿಸಿದರೂ, ಸ್ಪಿನ್ನರ್ ನೇಥನ್ ಲಯಾನ್ ಎಸೆತದಲ್ಲಿ ಟಿ20 ಶೈಲಿಯ ದೊಡ್ಡ ಹೊಡತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು.

ಆದರೆ ಆಪದ್ಬಾಂಧವ ಚೇತೇಶ್ವರ್ ಪೂಜಾರ ಮಾತ್ರ ತಂಡವನ್ನು ಕೈಬಿಡಲಿಲ್ಲ. ಆಸೀಸ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಪೂಜಾರ ಟೆಸ್ಟ್ ವೃತ್ತಿಜೀವನದಲ್ಲಿ 16ನೇ ಹಾಗೂ ಆಸ್ಟ್ರೇಲಿಯಾದಲ್ಲಿ ಮೊದಲ ಶತಕ ಬಾರಿಸಿ ತಂಡಕ್ಕೆ ಆಸರೆಯಾದರು.

ಅಲ್ಲದೆ ಟೆಸ್ಟ್ ನಲ್ಲಿ 5 ಸಾವಿರ ರನ್ ಗಳನ್ನೂ ಪೂರ್ತಿಗೊಳಿಸಿದರು. 9ನೆಯವರಾಗಿ ಔಟಾಗುವ ಮುನ್ನ ಪೂಜಾರ 246 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ 123 ರನ್ ಗಳಿಸಿ ರನೌಟಾದರು. 

ದಿನದಂತ್ಯಕ್ಕೆ ಭಾರತ ತಂಡ 87.5 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತು.

 Brief scores

India: 250/9 in 87.5 overs (Cheteshwar Pujara 123, Rohit Sharma 37, Rishabh Pant 25, R Ashwin 25; Mitchel Starc 2/63, Josh Hazlewood 2/52, Pat Cummins 2/49, Nathan Lyon 2/83).

LEAVE A REPLY

Please enter your comment!
Please enter your name here

twenty + 17 =