ಅಡಿಲೇಡ್ ಟೆಸ್ಟ್: ವಿಶ್ವದಾಖಲೆ ನಿರ್ಮಿಸಿದ ವಿಕೆಟ್ ಕೀಪರ್ ರಿಷಭ್ ಪಂತ್

0

ಅಡಿಲೇಡ್, ಡಿಸೆಂಬರ್ 10: ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಪಂದ್ಯದಲ್ಲಿ ಒಟ್ಟು 11 ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್, ಇಂಗ್ಲೆಂಡ್ ನ ಜೇಕ್ ರಸೆಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ಸ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಒಂದೇ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ 2018ರ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ಕ್ಯಾಚ್ ಪಡೆದಿದ್ದ ವೃದ್ಧಿಮಾನೇ ಸಹಾ ಅವರ ದಾಖಲೆಯನ್ನು 21 ವರ್ಷದ ರಿಷಭ್ ಪಂತ್ ಮುರಿದಿದ್ದಾರೆ. 

LEAVE A REPLY

Please enter your comment!
Please enter your name here

1 × two =