ಅಮೆರಿಕ ಕ್ರಿಕೆಟ್ ತಂಡಕ್ಕೆ ಕನ್ನಡಿಗ ಜ್ಯಾಕ್ ಕೋಚ್..?

0
J. Arun Kumar. File photo

ಬೆಂಗಳೂರು, ಫೆಬ್ರವರಿ 13: ಕರ್ನಾಟಕದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಜೆ.ಅರುಣ್ ಕುಮಾರ್ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಸದ್ಯ ಜ್ಯಾಕ್ ಅಮೆರಿಕದಲ್ಲಿದ್ದು, ಅಲ್ಲಿನ ಕ್ರಿಕೆಟ್ ಸಂಸ್ಥೆಯೊಂದಿಗೆ ಅಂತಿಮ ಹಂತದ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕ ಕ್ರಿಕೆಟ್ ಕುರಿತು ಜೆ.ಅರುಣ್ ಕುಮಾರ್ ಇತ್ತೀಚೆಗೆ ಮಾಡಿರುವ ಟ್ವೀಟ್ ಈ ಬೆಳವಣಿಗೆಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.

45 ವರ್ಷದ ಜೆ.ಅರುಣ್ ಕುಮಾರ್ ಕರ್ನಾಟಕ ತಂಡದ ಯಶಸ್ವಿ ಕೋಚ್ ಆಗಿದ್ದರು. ಅವರ ಅವಧಿಯಲ್ಲಿ ಕರ್ನಾಟಕ ತಂಡ 2013-14 ಹಾಗೂ 2014-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತ್ತು. ನಂತರ ಹೈದರಾಬಾದ್ ತಂಡದ ಕೋಚ್ ಆಗಿದ್ದ ಜ್ಯಾಕ್ ಇತ್ತೀಚೆಗೆ ಪುದುಚೇರಿ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟು

109 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ದೇಶೀಯ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್ ಜೆ.ಅರುಣ್ ಕುಮಾರ್ 20 ಶತಕ ಹಾಗೂ 36 ಅರ್ಧಶತಕಗಳ ಸಹಿತ 43ರ ಸರಾಸರಿಯಲ್ಲಿ 7208 ರನ್ ಗಳಿಸಿದ್ದಾರೆ. 100 ಲಿಸ್ಟ್ ‘ಎ’ ಪಂದ್ಯಗಳನ್ನಾಡಿ 7 ಶತಕ ಹಾಗೂ 19 ಅರ್ಧಶತಕಗಳ ನೆರವಿನಿಂದ 3227 ರನ್ ಕಲೆ ಹಾಕಿದ್ದಾರೆ.

LEAVE A REPLY

Please enter your comment!
Please enter your name here

8 + 1 =