ಆಸೀಸ್ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್‌ಗೆ ಗಂಭೀರ ಗಾಯ

0
PC: Mathew Hayden / Instagram
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅವರಿಗೆ ಅಪಘಾತವಾಗಿದ್ದು ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ರಜಾ ದಿನವಾದ್ದರಿಂದ ಕುಟುಂಬದ ಜೊತೆ ಹೇಡನ್ ಅವರು ಕ್ವೀನ್ಸ್ಲೆಂಡ್ಗೆ ತೆರಳಿದ್ದು, ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್ ಆಟವಾಡುತ್ತಿದ್ದರು. ಈ ವೇಳೆ ಹೇಡನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತದ ನಂತರ ತಕ್ಷಣವೇ ಹೇಡನ್ರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದೆ. ಬಳಿಕ ಸ್ಕ್ಯಾನಿಂಗ್ಗೆ ಸಹಾಯಮಾಡಿದ ಬೆನ್ ಸ್ಯೂ ಕೆಲ್ಲಿಗೆ ಧನ್ಯವಾದ ಎಂದು ಹೇಡನ್ ಹೇಳಿದ್ದಾರೆ.
ರಕ್ತದ ಮಧ್ಯೆ ತನಗೆ ಅಪಘಾತವಾಗಿರುವ ಫೋಟೋವನ್ನು ಹೇಡನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿ ದ್ದಾರೆ

LEAVE A REPLY

Please enter your comment!
Please enter your name here

sixteen − ten =