ಆಸ್ಟ್ರೇಲಿಯಾದಲ್ಲಿ ಕುದುರೆಯೊಂದಿಗೆ ರವೀಂದ್ರ ಜಡೇಜಾ ರೊಮ್ಯಾನ್ಸ್..!

0
PC: BCCI

ಅಡಿಲೇಡ್, ಡಿಸೆಂಬರ್ 12: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಒಬ್ಬ ಕುದುರೆ ಪ್ರೇಮಿ. ಜಡೇಜಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲೂ ಕೂಡ ಜಡೇಜಾ ಅವರ ಕುದುರೆ ಪ್ರೀತಿ ಮುಂದುವರಿದಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿದ ನಂತರ ಜಡೇಜಾ, ಕುದುರೆ ಲಾಯ ಒಂದಕ್ಕೆ ತೆರಳಿ ಅಲ್ಲಿದ್ದ ಕುದುರೆಯೊಂದಿಗೆ ಕೆಲ ಹೊತ್ತು ಕಳೆದಿದ್ದಾರೆ.

ಆಡಿಲೇಡ್ ನಲ್ಲಿ ಟೀಮ್ ಇಂಡಿಯಾದ ಲೋಕಲ್ ಮ್ಯಾನೇಜರ್ ಆಗಿದ್ದ ಕ್ರೇಗ್ ನ್ಯೂಟನ್ಸ್ ಅವರ ಮನೆಯಲ್ಲಿ ಕುದುರೆ ಇರುವುದನ್ನು ತಿಳಿದ ಜಡೇಜಾ, ಟೆಸ್ಟ್ ಪಂದ್ಯದ ನಂತರ ನೇರ ಅವರ ಮನೆಗೆ ಹೋಗಿದ್ದಾರೆ. ಅಲ್ಲಿದ್ದ ಕುದುರೆಗಳೊಂದಿಗೆ ಜಡೇಜಾ ಅವರು ಕಾಲ ಕಳೆದಿರುವ ವೀಡಿಯೊವನ್ನು ಬಿಸಿಸಿಐ.ಟಿವಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.  

ಸೌರಾಷ್ಟ್ರದ ಜಾಮನಗರ್ ನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ರವೀಂದ್ರ ಜಡೇಜಾ ಕುದುರೆಗಳನ್ನು ಸಾಕಿದ್ದಾರೆ. ಕ್ರಿಕೆಟ್ ನಿಂದ ಬಿಡುವಾದಾಗಲೆಲ್ಲಾ ಫಾರ್ಮ್ ಹೌಸ್ ಗೆ ತೆರಳಿ ಕುದುರೆಗಳೊಂದಿಗೆ ಕಾಲ ಕಳೆಯುತ್ತಾರೆ. ಅಲ್ಲದೆ ಹಾರ್ಸ್ ರೈಡಿಂಗ್ ಕೂಡ ಮಾಡುತ್ತಾರೆ.

ವೀಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ