ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಲಿರುವ ಕೆ.ಎಲ್ ರಾಹುಲ್

0
KL Rahul PC: BCCI/Twitter

ಬೆಂಗಳೂರು, ಜನವರಿ 30: ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧ ಫೆಬ್ರವರಿ 7ರಂದು ಕೇರಳದ ವಯನಾಡ್ ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’ ತಂಡದ ಪರ ಆಡಲಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ರಾಹುಲ್ ಆಡಿದ್ದರು. 5ನೇ ಪಂದ್ಯದಲ್ಲಿ 42 ರನ್ ಗಳಿಸಿದ್ದರು. ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿದ ಆರೋಪದಲ್ಲಿ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಅಮಾನತು ಮಾಡಿದ್ದ ಬಿಸಿಸಿಐ ಇತ್ತೀಚೆಗಷ್ಟೇ ಅಮಾನತನ್ನು ಹಿಂಪಡೆದಿತ್ತು.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ಭಾರತ ‘ಎ’ ತಂಡ: ಅಂಕಿತ್ ಬಾವ್ನೆ(ನಾಯಕ), ಕೆ.ಎಲ್ ರಾಹುಲ್, ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್, ರಿಕಿ ಭುಯಿ, ಸಿದ್ದೇಶ್ ಲಾಡ್, ಕೆ.ಎಸ್ ಭರತ್(ವಿಕೆಟ್ ಕೀಪರ್), ಜಲಜ್ ಸಕ್ಸೇನ, ಎಸ್.ನದೀಮ್, ಮಯಾಂಕ್ ಮಾರ್ಕಂಡೆ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಆವೇಶ್ ಖಾನ್, ವರುಣ್ ಆ್ಯರೋನ್.

The team is as follows: Ankit Bawne (C), KL Rahul, AR Easwaran, Priyank Panchal, Ricky Bhui, Siddhesh Lad, K.S. Bharat (WK), Jalaj Saxena, S Nadeem, Mayank Markande, Navdeep Saini, Sharadul Thakur, Avesh Khan, Varun Aaron

LEAVE A REPLY

Please enter your comment!
Please enter your name here

sixteen − fifteen =