ಇಂಡೋನೇಷ್ಯಾ ಮಾಸ್ಟರ್ಸ್: 4ನೇ ಬಾರಿ ಪ್ರಶಸ್ತಿ ಗೆದ್ದ ಸೈನಾ ನೆಹ್ವಾಲ್

0

ಜಕಾರ್ತ, ಜನವರಿ 27: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 4ನೇ ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, ಸ್ಪೇನ್ ನ ವಿಶ್ವಚಾಂಪಿಯನ್ ಹಾಗೂ ಒಲಿಂಪಿಕ್ ಚಾಂಪಿಯನ್ ಕ್ಯಾರೊಲಿನಾ ಮರಿನ್ 4-10ರಲ್ಲಿ ಹಿನ್ನಡೆಯಲ್ಲಿದ್ದಾಗ ಮೊಣಕಾಲಿನ ನೋವಿನ ಕಾರಣ ಮರಿನ್ ಪಂದ್ಯ ತೊರೆದರು. ಹೀಗಾಗೀ ಸೈನಾ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

ಸೈನಾ ನೆಹ್ವಾಲ್ ಇತ್ತೀಚೆಗಷ್ಟೇ ಮತ್ತೊಬ್ಬ ಖ್ಯಾತ ಬ್ಯಾಡ್ಮಿಂಟನ್ ತಾರೆ ಪರುಪಳ್ಳಿ ಕಶ್ಯಪ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಕಶ್ಯಪ್ ಅವರೇ ಸೈನಾಗೆ ಕೋಚ್ ಆಗಿದ್ದಾರೆ.

LEAVE A REPLY

Please enter your comment!
Please enter your name here

seven + thirteen =