ಇಂಡೋನೇಷ್ಯಾ ಮಾಸ್ಟರ್ಸ್: ಗಂಡನ ಕೋಚಿಂಗ್, ಸೈನಾ ಶೈನಿಂಗ್..!

0

ಜಕಾರ್ತ, ಜನವರಿ 26: ಭಾರತದ ಖ್ಯಾದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 8ನೇ ಬಾರಿ ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, ಚೀನಾದ ಹೇ ಬಿಂಜಿಯಾವೊ ಅವರನ್ನು 18-21, 21-12, 21-18 ಗೇಮ್ ಅಂತರದಲ್ಲಿ ಸೋಲಿಸಿದರು.

ಕಳೆದ ವಾರವಷ್ಟೇ ನಡೆದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಸೆಮಿಫೈನಲ್ ನಲ್ಲಿ ಸೋಲು ಕಂಡಿದ್ದರು. ಸೈನಾ ನೆಹ್ವಾಲ್ ಇತ್ತೀಚೆಗಷ್ಟೇ ಮತ್ತೊಬ್ಬ ಖ್ಯಾತ ಬ್ಯಾಡ್ಮಿಂಟನ್ ತಾರೆ ಪರುಪಳ್ಳಿ ಕಶ್ಯಪ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಕಶ್ಯಪ್ ಅವರೇ ಸೈನಾಗೆ ಕೋಚ್ ಆಗಿದ್ದಾರೆ.

LEAVE A REPLY

Please enter your comment!
Please enter your name here

one × 5 =