‘ಇವತ್ತು ಮಾಡಿ ಬಂದಿದ್ದೀಯಾ?’ ಮೈದಾನದಲ್ಲೇ ಪಾಂಡ್ಯಗೆ ಕ್ರಿಕೆಟ್ ಫ್ಯಾನ್ ಟಾಂಗ್..!

0

ಆಕ್ಲೆಂಡ್, ಫೆಬ್ರವರಿ 9: ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಮಹಿಳಾ ಅಭಿಮಾನಿಯೊಬ್ಬರು ಕಿಚಾಯಿಸಿದ್ದಾರೆ.

ಆಕ್ಲೆಂಡ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದ ವೇಳೆಈ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಸೆಕ್ಸ್ ಹಾಗೂ ಮಹಿಳೆಯ ಬಗ್ಗೆ ಕಮೆಂಟ್ ಮಾಡಿ ಸಾಮಾಜಿಕ ಜಾಲತಾಣಲದಲ್ಲಿ ಪಾಂಡ್ಯ ಟ್ರೋಲ್ ಆಗಿದ್ದರು. ಇದನ್ನು ನೆನಪಿಸುವಂತೆ ಮಾಡಿದ ಮಹಿಳಾ ಅಭಿಮಾನಿಯೊಬ್ಬರು ನ್ಯೂಜಿಲೆಂಡ್ ವಿರುದ್ಧ 2ನೇ ಟಿ20 ಪಂದ್ಯದ ವೇಳೆ ‘ಪಾಂಡ್ಯ ಇವತ್ತು ಮಾಡಿ ಬಂದಿದ್ದೀಯಾ’ ಬರೆದಿರುವ ಭಿತ್ತಿ ಪತ್ರ ಪ್ರದರ್ಶಿಸಿದ್ದರು.

ಸದ್ಯ ಅಭಿಮಾನಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರ್ಯಕ್ರಮದಲ್ಲಿ ವರ್ಜಿನಿಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಅಂದು ನಾನು ಪೋಷಕರಿಗೆ ‘ಮೈ ಕರ್ಕೆ ಆಯಾ’ ಎಂದು ಹೇಳಿದ್ದಾಗಿ ಪಾಂಡ್ಯ ತಿಳಿಸಿದ್ದರು. ಪೋಷಕರೊಂದಿಗೆ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ ಎಂದು ಹೇಳಿರುವ ಪಾಂಡ್ಯ, ಒಳ್ಳೆಯ ವಿಚಾರಗಳಾಗಲಿ ಅಥವಾ ಕೆಟ್ಟ ವಿಚಾರಗಳಾಗಿ ತಮ್ಮ ಎಲ್ಲಾ ಸಿಕ್ರೆಟ್ ಗಳನ್ನು ಹೇಳುತ್ತೇನೆ ಎಂದಿದ್ದರು.

LEAVE A REPLY

Please enter your comment!
Please enter your name here

seventeen + 14 =