ಈ ಕನ್ನಡಿಗ ಟೀಮ್ ಇಂಡಿಯಾ ಬೆನ್ನೆಲುಬು ಅಂದ್ರು ಹರ್ಭಜನ್ ಸಿಂಗ್..!

0

ಬೆಂಗಳೂರು, ಡಿಸೆಂಬರ್ 7: ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಡಿಲೇಡ್ ಓವಲ್ ಮೈದಾನದಲ್ಲಿ ಆತಿಥೇಯರ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯವಾಡುತ್ತಿದೆ. 

ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿರುವ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಡಿಲೇಡ್ ಮೈದಾನದಿಂದ ವಿಶೇಷ ಚಿತ್ರವೊಂದನ್ನು ಕ್ಲಿಕ್ಕಿಸಿ ಟ್ವೀಟ್ ಮಾಡಿದ್ದಾರೆ. ಆ ಚಿತ್ರ ಬೇರಾರದ್ದೂ ಅಲ್ಲ, ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್, ಕನ್ನಡಿಗ ರಾಘವೇಂದ್ರ ಡಿವಿಜಿಐ ಅವರದ್ದು.

ಟೀಮ್ ಇಂಡಿಯಾ ಯಶಸ್ಸಿನಲ್ಲಿ ರಾಘವೇಂದ್ರ ಅವರ ಪಾತ್ರ ತುಂಬಾ ದೊಡ್ಡದು. ನೆಟ್ ಪ್ರಾಕ್ಟೀಸ್ ವೇಳೆ ಆಟಗಾರರಿಗೆ 2 ಸಾವಿರಕ್ಕೂ ಎಸೆತಗಳನ್ನು ಎಸೆಯುತ್ತಾರೆ. ತಮ್ಮ ಅತ್ಯಂತ ವೇಗದ ಎಸೆತಗಳಿಂದ ಆಟಗಾರರಿಗೆ ಉತ್ತಮ ಗುಣಮಟ್ಟದ ಆಭ್ಯಾಸ ಸಿಗುವಂತೆ ಮಾಡುತ್ತಾರೆ.

ಭಾರತ ತಂಡಕ್ಕಾಗಿ ರಾಘವೇಂದ್ರ ಎಷ್ಟು ಪರಿಶ್ರಮ ಪಡುತ್ತಾರೆ ಎಂಬುದನ್ನು ಹತ್ತಿರದಿಂದ ಕಂಡಿರುವ ಹರ್ಭಜನ್ ಸಿಂಗ್, ಫೋಟೊ ಜೊತೆಗೆ ರಾಘವೇಂದ್ರ ಅವರ ಬಗ್ಗೆ ಮೆಚ್ಚುಗೆಯ ನುಡಿಗಳನ್ನೂ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here

two × five =