ಉತ್ತಪ್ಪ ಈಸ್ ಬ್ಯಾಕ್: ಶಸ್ತ್ರಚಿಕಿತ್ಸೆಯ ನಂತರ ಅಭ್ಯಾಸ ಆರಂಭಿಸಿದ ರಾಬಿನ್

0

ಬೆಂಗಳೂರು, ಫೆಬ್ರವರಿ 9: ಕರ್ನಾಟಕದ ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪಾದದ ನೋವಿನಿಂದ ಚೇತರಿಸಿಕೊಂಡು ಮತ್ತೆ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.

ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಉತ್ತಪ್ಪ ಕೋಲ್ಕತಾ ನೈಟ್ ನೈಟ್ ರೈಡರ್ಸ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ತಾಲೀಮು ನಡೆಸಿದ್ದಾರೆ. ಅಲ್ಲದೆ ಈ ದೃಶ್ಯಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಕೆಕೆಆರ್ ತಂಡದ ಉಪನಾಯಕರೂ ಆಗಿರುವ 33 ವರ್ಷದ ಉತ್ತಪ್ಪ ಕಳೆದ ಅಕ್ಟೋಬರ್ ನಲ್ಲಿ ಬಲಗಾಲಿನ ಪಾದದ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದರು. ಹೀಗಾಗಿ ರಣಜಿ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದರು. ದೇಶೀಯ ಕ್ರಿಕೆಟ್ ನಲ್ಲಿ ಉತ್ತಪ್ಪ ಸೌರಾಷ್ಟ್ರ ಪರ ಆಡುತ್ತಿದ್ದು, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

ten − two =