ಎಸೆಕ್ಸ್ ಪರ ಅಮೋಘ ಶತಕ: ಕೌಂಟಿ ಕ್ರಿಕೆಟ್‌ಗೆ ವಿಜಯ್ ಭರ್ಜರಿ ಪದಾರ್ಪಣೆ

0
PC: Essex/Twitter

ನಾಟಿಂಗ್‌ಹ್ಯಾಮ್, ಸೆಪ್ಟೆಂಬರ್ 13: ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ತಮಿಳುನಾಡಿನ ಅನುಭವಿ ಓಪನರ್ ಮುರಳಿ ವಿಜಯ್ ಕೌಂಟಿ ಕ್ರಿಕೆಟ್‌ನ ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ.
ಎಸೆಕ್ಸ್ ಪರ ಆಡುತ್ತಿರುವ ಮುರಳಿ ವಿಜಯ್ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧದ ಪಂದ್ಯ ಕೊನೆಯ ದಿನವಾದ ಗುರುವಾರ 2ನೇ ಇನ್ನಿಂಗ್ಸ್‌ನಲ್ಲಿ 100 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ವಿಜಯ್ 56 ರನ್ ಗಳಿಸಿದ್ದರು. ವಿಜಯ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಎಸೆಕ್ಸ್ ತಂಡ ನಾಲ್ಕು ದಿನಗಳ ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವು ದಾಖಲಿಸಿತು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ವಿಜಯ್ 2 ಪಂದ್ಯಗಳಿಂದ ಕೇವಲ 26 ರನ್ ಗಳಿಸಿದ್ದರು. ಹೀಗಾಗಿ ಮೂರನೇ ಟೆಸ್ಟ್‌ನ ಆಡುವ ಬಳಗದಿಂದ ಅವರನ್ನು ಹೊರಗಿಡಲಾಗಿತ್ತು. ಅಲ್ಲದೆ 4 ಮತ್ತು 5ನೇ ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ವಿಜಯ್ ಅವರ ಬದಲು ಮುಂಬೈನ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರಿಗೆ ಸ್ಥಾನ ನೀಡಲಾಗಿತ್ತು.

Brief score
Nottinghamshire: 177 & 337 in 103 overs (KC Brathwaite 68, BT Slater 54, SJ Mullaney 53; SR Harmer 6/87).
Essex: 233 & 282/2 in 69.4 overs (Murali Vijay 100, T Westley 110 not out; SR Patel 1/60).

LEAVE A REPLY

Please enter your comment!
Please enter your name here

twelve + three =