ಏಷ್ಯನ್ ಗೇಮ್ಸ್: ಇತಿಹಾಸ ಬರೆದ ಕೊಡಗಿನ ಕುವರಿ ಅಶ್ವಿನಿ ಪೊನ್ನಪ್ಪ

0
PC: Doordarshan Sports/Twitter

ಬೆಂಗಳೂರು: ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ರಣಭೀಕರ ಮಳೆ, ಪ್ರವಾಹಕ್ಕೆ ತತ್ತರಿಸಿ ಕೊಡವರ ಬದುಕು ದುಸ್ತರವಾಗಿದೆ. ಈ ನೋವಿನ ನಡುವೆ ಕೊಡಗಿನ ಕುವರಿ ಅಶ್ವಿನಿ ಪೊನ್ನಪ್ಪ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಬ್ಯಾಡ್ಮಿಂಟನ್ ನ ಮಹಿಳಾ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ 32 ವರ್ಷಗಳ ನಂತರ ಏಷ್ಯನ್ ಗೇಮ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. 1986ರ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಹರ್ಫಿಶ್ ನಾರಿಮನ್ ಮತ್ತು ಮಲ್ಲಿಕಾ ಬರುವಾ ಕೊನೆಯ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

LEAVE A REPLY

Please enter your comment!
Please enter your name here

seven − one =