ಏಷ್ಯನ್ ಗೇಮ್ಸ್: ದಾಖಲೆಯೊಂದಿಗೆ ಚಿನ್ನ ಗೆದ್ದ ನೀರಜ್ ಛೋಪ್ರಾ

0
ಕೆ.ಎಲ್ ರಾಹುಲ್

ಜಕಾರ್ತ, ಆಗಸ್ಟ್ 27: ಭಾರತದ ಯುವ ಜಾವೆಲಿನ್ ತಾರೆ ನೀರಜ್ ಛೋಪ್ರಾ, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
ಒಂದೇ ವರ್ಷ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎಂಬ ಹಿರಿಮೆಗೆ ನೀರಜ್ ಪಾತ್ರರಾಗಿದ್ದಾರೆ. ಭಾರತದ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ 1958ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು. 20 ವರ್ಷದ ನೀರಜ್ ಛೋಪ್ರಾ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಸ್ವರ್ಣ ಪದಕ ಗೆದ್ದಿದ್ದರು.
ತಮ್ಮ ಮೊದಲ ಪ್ರಯತ್ನದಲ್ಲೇ 83.46 ಮೀ. ದೂರ ಜಾವೆಲಿನ್ ಎಸೆದ ನೀರಜ್ ಛೋಪ್ರಾಗೆ ಚಿನ್ನ ಗೆಲ್ಲಲು ಇಷ್ಟೇ ಸಾಕಾಯಿತು.

 

LEAVE A REPLY

Please enter your comment!
Please enter your name here

18 + fifteen =