ಏಷ್ಯನ್ ಗೇಮ್ಸ್: ಚಿನ್ನ ಗೆದ್ದು ದೇಶಕ್ಕೆ ಗೌರವ ತಂದ ಸೈನಿಕ

0
PC: twitter

ಜಕಾರ್ತ, ಆಗಸ್ಟ್ 30: ಕೇರಳದ ಅಥ್ಲೀಟ್ ಜಿನ್ಸನ್ ಜಾನ್ಸನ್, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಪುರುಷರ 1,500 ಮೀ. ಓಟ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 56 ವರ್ಷಗಳ ನಂತರ 1,500 ಮೀ. ರೇಸ್‌ನಲ್ಲಿ ಚಿನ್ನದ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ 27 ವರ್ಷದ ಓಟಗಾರ ಜಿನ್ಸನ್ ಜಾನ್ಸನ್ 3:44.72 ನಿಮಿಷಗಳಲ್ಲಿ ಗುರಿ ತಲುಪಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ 6ನೇ ಚಿನ್ನದ ಪದಕ ಗೆದ್ದುಕೊಟ್ಟರು. ಇರಾನ್‌ನ ಆಮಿರ್ ಮೊರಾಡಿ(3:45.62) ಬೆಳ್ಳಿ ಪದಕ ಗೆದ್ದರೆ, ಬಹರೈನ್‌ನ ಮೊಹಮ್ಮದ್ ಟ್ಯುಯೋಲಿ(3:45.88) ಕಂಚಿನ ಪದಕ ಪಡೆದರು. ಮಂಗಳವಾರ 800 ಮೀ. ರೇಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಮಂಜೀತ್ ಸಿಂಗ್(3:46.57) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಬುಧವಾರ ನಡೆದ ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಭಾರತದ ಸೀಮಾ ಪುನಿಯಾ ಕಂಚು ಗೆದ್ದರೆ, ಮಹಿಳೆಯ 1,500 ಮೀ. ರೇಸ್‌ನಲ್ಲಿ ಚಿತ್ರಾ ಉನ್ನಿಕೃಷ್ಣನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.

LEAVE A REPLY

Please enter your comment!
Please enter your name here

5 × 5 =