ಏಷ್ಯನ್ ಗೇಮ್ಸ್ : ಪಾಕ್ ಬಗ್ಗು ಬಡಿದು ಕಂಚು ಗೆದ್ದ ಭಾರತದ ಪುರುಷರು

0

ಜಕಾರ್ತ, ಸೆಪ್ಟೆಂಬರ್ 1: ಭಾರತದ ಪುರುಷರ ಹಾಕಿ ತಂಡ, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದೆ.
ಶನಿವಾರ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಭಾರತ ಪರ ಆಕಾಶ್‌ದೀಪ್ ಸಿಂಗ್(3ನೇ ನಿಮಿಷ) ಮತ್ತು ಡ್ರ್ಯಾಗ್ ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್(50) ತಲಾ ಒಂದು ಗೋಲು ಗಳಿಸಿ ಭಾರತ ಕನಿಷ್ಠ ಕಂಚಿನ ಪದಕದೊಂದಿಗೆ ತವರಿಗೆ ಮರಳಲು ಕಾರಣರಾದರು.

 

LEAVE A REPLY

Please enter your comment!
Please enter your name here

4 × two =