ಏಷ್ಯನ್ ಗೇಮ್ಸ್ : ಬೋಪಣ್ಣ-ಶರಣ್ ಜೋಡಿಗೆ ಟೆನಿಸ್ ಡಬಲ್ಸ್‌ನಲ್ಲಿ ಚಿನ್ನ

0
PC: Doordarshan Sports/Twitter

ಜಕಾರ್ತ: ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಪುರುಷರ ಟೆನಿಸ್ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಬೋಪಣ್ಣ-ಶರಣ್ ಜೋಡಿ ಕಜಖಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಮತ್ತು ಡೆನಿಸ್ ಯೆವ್ಸೆವ್ ಜೋಡಿಯನ್ನು 6-3, 6-4ರ ನೇರ ಸೆಟ್‌ಗಳಿಂದ ಸೋಲಿಸಿ ಪ್ರಸಕ್ತ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 6ನೇ ಚಿನ್ನ ಗೆದ್ದುಕೊಟ್ಟಿತು.

LEAVE A REPLY

Please enter your comment!
Please enter your name here

fifteen − 12 =