ಏಷ್ಯನ್ ಗೇಮ್ಸ್: ಇತಿಹಾಸ ಬರೆದ ಸಿಂಧು, ಸೈನಾಗೆ ಕಂಚು

0
PC: Team India/Twitter

ಜಕಾರ್ತ, ಆಗಸ್ಟ್ 27: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ತಾರೆ ಎಂಬ ದಾಖಲೆಗೆ ಸಿಂಧು ಪಾತ್ರರಾಗಿದ್ದಾರೆ.
ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 3ನೇ ರ್ಯಾಂಕ್‌ನ ಸಿಂಧು, ವಿಶ್ವದ ನಂ.2 ಆಟಗಾರ್ತಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು 21-17, 15-21, 21-10 ಗೇಮ್‌ಗಳಿಂದ ಸೋಲಿಸಿದರು.
ಫೈನಲ್‌ನಲ್ಲಿ ಸಿಂಧು, ವಿಶ್ವದ ನಂ.1 ಆಟಗಾರ್ತಿ ತೈವಾನ್‌ನ ತಾಯ್ ಜು ಯಿಂಗ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ತಾಯ್ ಜು ಯಿಂಗ್ ಭಾರತದ ಸೈನಾ ನೆಹ್ವಾಲ್ ಅವರನ್ನು 21-17, 21-14ರ ನೇರ ಗೇಮ್‌ಗಳಿಂದ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಸೋಲುಂಡ ಸೈನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

PC: Rajyawardhan Rathore/Twitter

LEAVE A REPLY

Please enter your comment!
Please enter your name here

19 − three =