ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್: ಇತಿಹಾಸ ಬರೆದ ‘ಬೆಳ್ಳಿ ತಾರೆ’ ಸಿಂಧು

0
PC: twitter
ಜಕಾರ್ತ, ಆಗಸ್ಟ್ 28: ಭಾರತದ ಟಾಪ್ ಶಟ್ಲರ್ ಪಿ.ವಿ ಸಿಂಧು, ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಚಿನ್ನದ ಕನಸು ನನಸಾಗದಿದ್ದರೂ, ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ತಾರೆ ಎಂಬ ದಾಖಲೆ ಬರೆದಿದ್ದಾರೆ.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 3ನೇ ರ್ಯಾಂಕ್‌ನ ಸಿಂಧು, ವರ್ಲ್ಡ್ ನಂ.1 ಆಟಗಾರ್ತಿ ತೈವಾನ್‌ನ ತಾಯ್ ಜು ಯಿಂಗ್ ವಿರುದ್ಧ 13-21, 16-21ರ ನೇರ ಗೇಮ್‌ಗಳಿಂದ ಸೋಲು ಅನುಭವಿಸಿದರು.
ಭಾರತದ ಮತ್ತೊಬ್ಬ ಶಟ್ಲರ್ ಸೈನಾ ನೆಹ್ವಾಲ್ ಸೋಮವಾರ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದರು.
https://twitter.com/sachin_rt/status/1034449533244256257

LEAVE A REPLY

Please enter your comment!
Please enter your name here

six + ten =