ಏಷ್ಯನ್ ಗೇಮ್ಸ್ ಹಾಕಿ: ಕೊರಿಯಾ ವಿರುದ್ಧ ಭಾರತಕ್ಕೆ 5-3 ಗೋಲುಗಳ ಅಮೋಘ ಜಯ

0
File photo: Hockey India

ಜಕಾರ್ತ (ಇಂಡೋನೇಷ್ಯಾ), ಆಗಸ್ಟ್ 26: ಹಾಲಿ ಚಾಂಪಿಯನ್ ಭಾರತ ತಂಡ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಉತ್ತಮ ಆಟವನ್ನು ಮುಂದುವರಿಸಿದ್ದು, ಭಾನುವಾರ ನಡೆದ ಪಂದ್ಯದಲ್ಲಿ ಕೊರಿಯಾ ವಿರುದ್ಥ 5-3 ಗೋಲುಗಳ ಅಂತರದಲ್ಲಿ ಅಮೋಘ ಜಯ ದಾಖಲಿಸಿದೆ.

ಇದು ಪೂಲ್ ‘ಎ’ನಲ್ಲಿ ಭಾರತಕ್ಕೆ ಲಭಿಸಿದ ಸತತ 4ನೇ ಗೆಲುವು. ಇದಕ್ಕೂ ಮುನ್ನ ಇಂಡೋನೇಷ್ಯಾ ವಿರುದ್ಧ 17-0, ಹಾಂಕಾಂಗ್ ವಿರುದ್ಧ 26-0 ಮತ್ತು ಜಪಾನ್ ವಿರುದ್ಧ 8-0 ಗೋಲುಗಳಿಂದ ಭಾರತ ಗೆದ್ದಿತ್ತು.

ಭಾರತ ಪರ ಡ್ರ್ಯಾಗ್ ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್(1ನೇ ನಿಮಿಷ), ಚಿಂಗ್ಲೆನ್ಸೇನಾ ಸಿಂಗ್ ಕನ್ಗುಜಮ್(5), ಲಲಿತ್ ಉಪಾಧ್ಯಾಯ(16), ಮನ್ಪ್ರೀತ್ ಸಿಂಗ್(49) ಮತ್ತು ಆಕಾಶ್ ದೀಪ್ ಸಿಂಗ್(56) ತಲಾ ಒಂದು ಗೋಲು ಗಳಿಸಿದರು.

LEAVE A REPLY

Please enter your comment!
Please enter your name here

fifteen − ten =