ಏಷ್ಯನ್ ಗೇಮ್ಸ್ ಹಾಕಿ: ದಕ್ಷಿಣ ಕೊರಿಯಾ ವಿರುದ್ಧ ಭಾರತಕ್ಕೆ ಜಯ ತಂದ ಗುರ್ಜಿತ್ ಕೌರ್

0
Drag-flicker-Gurjit-Kaur-scored-two-goals-for-India. File Photo: Hockey India

ಜಕಾರ್ತ: ಸಂಘಟಿತ ಮತ್ತು ಆತ್ಮವಿಶ್ವಾಸದ ಆಟವಾಡಿದ ಭಾರತ ಮಹಿಳಾ ತಂಡ, ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳ ಭರ್ಜರಿ ಜಯ ಗಳಿಸಿದೆ. ಪೂಲ್ ಬಿ ವಿಭಾಗದ ತನ್ನ 3ನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ ಮೇಲುಗೈ ಸಾಧಿಸಿ ಚಾಂಪಿಯನ್ಸ್ ಟ್ರೋಫಿಯ ಸೋಲಿಗೆ ಸೇಡು ತೀರಿಸಿಕೊಂಡಿತು.
ಭಾರತ ಪರ ನವನೀತ್ ಕೌರ್(16ನೇ ನಿಮಿಷ), ಗುರ್ಜಿತ್ ಕೌರ್(54, 55) ಮತ್ತು ವಂದನಾ ಕಠಾರಿಯಾ (56) ಗೋಲು ಗಳಿಸಿದರೆ, ದ.ಕೊರಿಯಾ ಪರ ಯುರಿನ್ ಲೀ (21) ಒಂದು ಗೋಲು ಬಾರಿಸಿದರು.

LEAVE A REPLY

Please enter your comment!
Please enter your name here

14 − 12 =