ಏಷ್ಯನ್ ಗೇಮ್ಸ್ ಹಾಕಿ: ರಾಣಿ ಹ್ಯಾಟ್ರಿಕ್, ಸೆಮಿಫೈನಲ್‌ಗೆ ಭಾರತ ತಂಡ

0
Rani inspired India with a hattrick against Thailand. PC: Hockey India

ಜಕಾರ್ತ, ಆಗಸ್ಟ್ 27: ಭಾರತ ಮಹಿಳಾ ಹಾಕಿ ತಂಡ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಸೋಮವಾರ ನಡೆದ ಪೂಲ್ ಬಿ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ತಂಡವನ್ನು 5-0 ಗೋಲುಗಳಿಂದ ಸೋಲಿಸಿ ಟೂರ್ನಿಯಲ್ಲಿ ಸತತ 4ನೇ ಗೆಲುವಿನೊಂದಿಗೆ ತನ್ನ ಅಜೇಯ ಓಟ ಮುಂದುವರಿಸಿತು. ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತ ತಂಡದ ನಾಯಕಿ ರಾಣಿ 37, 46 ಹಾಗೂ 56ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಉಳಿದೆರಡು ಗೋಲುಗಳನ್ನು ಮೋನಿಕಾ(52) ಮತ್ತು ನವ್‌ಜೋತ್ ಕೌರ್(55) ಗಳಿಸಿದರು.

LEAVE A REPLY

Please enter your comment!
Please enter your name here

18 − 13 =