ಏಷ್ಯನ್ ಗೇಮ್ಸ್ ಹಾಕಿ: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಪುರುಷರು

0
Akashdeep Singh scored six goals for India. PC: Hockey India

ಜಕಾರ್ತ, ಆಗಸ್ಟ್ 28: ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 20-0 ಗೋಲುಗಳ ಅಂತರದ ಅಮೋಘ ಜಯ ದಾಖಲಿಸಿದ ಭಾರತದ ಪುರುಷರ ತಂಡ, 18ನೇ ಏಷ್ಯನ್ ಗೇಮ್ಸ್‌ನಲ್ಲಿ ಸತತ 5ನೇ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಗೆಲೋರ ಬುಂಗ್ ಕರ್ನೊ ಹಾಕಿ ಫೀಲ್ಡ್‌ನಲ್ಲಿ ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪೂಲ್ ‘ಎ’ ಪಂದ್ಯದಲ್ಲಿ ಭಾರತ ತಂಡ ಗೋಲುಗಳ ಮಳೆಗರೆಯಿತು. ಆಕಾಶ್‌ದೀಪ್ ಸಿಂಗ್(10, 11, 18, 23, 33, 43ನೇ ನಿಮಿಷ) ಆರು ಗೋಲುಗಳನ್ನು ಬಾರಿಸಿದರೆ, ರೂಪಿಂದರ್ ಪಾಲ್ ಸಿಂಗ್(2, 52, 53), ಹರ್ಮನ್‌ಪ್ರೀತ್ ಸಿಂಗ್(6, 22, 33), ಮನ್‌ದೀಪ್ ಸಿಂಗ್(36, 44, 59) ತಲಾ 33 ಗೋಲುಗಳನ್ನು ಬಾರಿಸಿದರು. ಲಲಿತ್ ಉಪಾಧ್ಯಯ(58, 59) ಎರಡು ಗೋಲು, ವಿವೇಕ್ ಸಾಗರ್ ಪ್ರಸಾದ್(32), ಅಮಿತ್ ರೋಹಿದಾಸ್(30) ಮತ್ತು ದಿಲ್‌ಪ್ರೀತ್ ಸಿಂಗ್(2) ತಲಾ ಒಂದು ಗೋಲು ಗಳಿಸಿದರು.
ಭಾರತ ತಂಡ ಆಗಸ್ಟ್ 30ರಂದು ತನ್ನ ಸೆಮಿಫೈನಲ್ ಪಂದ್ಯವನ್ನಾಡಲಿದೆ.
ಇದೇ ವೇಳೆ ಮಹಿಳಾ ತಂಡವೂ ಸೆಮಿಫೈನಲ್ ಪ್ರವೇಶಿಸಿದ್ದು, ಚೀನಾ ವಿರುದ್ಧ ಬುಧವಾರ ಸಂಜೆ 6.30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಚೀನಾ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

10 + 11 =