ಏಷ್ಯನ್ ಗೇಮ್ಸ್ ಹಾಕಿ : ಹಾಲಿ ಚಾಂಪಿಯನ್ ಭಾರತಕ್ಕೆ ಜಪಾನ್ ವಿರುದ್ಧ 8-0 ಗೋಲುಗಳ ಭರ್ಜರಿ ಜಯ

0
PC: Hockey India

ಜಕಾರ್ತ: ಹಾಲಿ ಚಾಂಪಿಯನ್ ಭಾರತದ ಪುರುಷರ ಹಾಕಿ ತಂಡ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಶನಿವಾರ ನಡೆದ ಪೂಲ್ ಎ ಪಂದ್ಯದಲ್ಲಿ ಭಾರತ ತಂಡ ಜಪಾನ್ ತಂಡವನ್ನು 8-0 ಗೋಲುಗಳಿಂದ ಭರ್ಜರಿಯಾಗಿ ಮಣಿಸಿದೆ.
ಇದರೊಂದಿಗೆ ಭಾರತ ತಂಡ ಟೂರ್ನಿಯಲ್ಲಿ ತನ್ನ ಗೋಲು ಗಳಿಕೆಯನ್ನು 51ಕ್ಕೆ ಹೆಚ್ಚಿಸಿಕೊಂಡಿದೆ. ಇಂಡೋನೇಷ್ಯಾ ವಿರುದ್ಧ 17-0 ಹಾಗೂ ಹಾಂಕಾಂಗ್ ವಿರುದ್ಧ ಭಾರತ 26-0 ಗೋಲುಗಳಿಂದ ಗೆದ್ದಿತ್ತು.
ಜಪಾನ್ ವಿರುದ್ಧ ಕನ್ನಡಿಗ ಎಸ್.ವಿ ಸುನಿಲ್ (7ನೇ ನಿಮಿಷ), ರೂಪಿಂದರ್ ಪಾಲ್ ಸಿಂಗ್ (17, 38), ಮಂದೀಪ್ ಸಿಂಗ್ (32, 57), ಆಕಾಶ್‌ದೀಪ್ ಸಿಂಗ್ (46) ಮತ್ತು ವಿವೇಕ್ ಸಾಗರ್ ಪ್ರಸಾದ್ (47) ಗೋಲು ಗಳಿಸಿದರು.

LEAVE A REPLY

Please enter your comment!
Please enter your name here

twenty − 15 =