ಏಷ್ಯನ್ ನೆಟ್‌ಬಾಲ್: ಭಾರತ ತಂಡದಲ್ಲಿ ನಂದಿನಿ, ರಂಜಿತಾಗೆ ಸ್ಥಾನ

0

ಬೆಂಗಳೂರು, ಆಗಸ್ಟ್ 31: ಸೆಪ್ಟೆಂಬರ್ 1ರಿಂದ 9ರವೆರೆಗೆ ಸಿಂಗಾಪುರದಲ್ಲಿ ನಡೆಯಲಿರುವ ಎಂ1 ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಕರ್ನಾಟಕದ ಆಟಗಾರ್ತಿಯರಾದ ನಂದಿನಿ ಎಲ್.ಜಿ ಮತ್ತು ರಂಜಿತಾ ಬಿ.ಜೆ ಸ್ಥಾನ ಪಡೆದಿದ್ದಾರೆ.
ಪ್ರತಿಭಾನ್ವಿತ ಆಟಗಾರ್ತಿಯರಾದ ನಂದಿನಿ ಮತ್ತು ರಂಜಿತಾ ದಕ್ಷಿಣ ಭಾರತದಿಂದ ಭಾರತ ತಂಡಕ್ಕೆ ಆಯ್ಕೆಯಾದ ಇಬ್ಬರು ಆಟಗಾರ್ತಿಯರಾಗಿದ್ದಾರೆ. ಇವರಿಬ್ಬರು ಕಳೆದ 10 ವರ್ಷಗಳಿಂದ ಕರ್ನಾಟಕ ತಂಡವನ್ನು ಪ್ರತಿನಿಸುತ್ತಿದ್ದಾರೆ.

ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಭಾರತ ತಂಡ:
ಆಯುಷಿ ಶರ್ಮಾ, ಪಲ್ಲವಿ ಕುಮಾರಿ, ಕೀರ್ತಿ, ಪೂಜಾ ಚೋಪ್ರಾ, ನಂದಿನಿ ಎಲ್.ಜಿ., ರಂಜಿತಾ ಬಿ.ಜೆ., ರುಚಿ, ಆಂಚಲ್ ಚೌಹಾಣ್, ಮೇಘಾ ಚೌಧರಿ, ಗುರ್‌ಪ್ರೀತ್ ಕೌರ್, ಜ್ಯೋತಿ ಶರ್ಮಾ, ನಿ ಶರ್ಮಾ.
ಕೋಚ್: ಲಲಿತ್, ಸಹಾಯಕ ಕೋಚ್: ಸೋನಾಲಿ, ಮ್ಯಾನೇಜರ್: ಅಮರ್‌ದೀಪ್ ಕೌರ್.

LEAVE A REPLY

Please enter your comment!
Please enter your name here

16 − 7 =