ಏಷ್ಯಾಕಪ್: ರೋಹಿತ್-ಶಿಖರ್ ಅಬ್ಬರಕ್ಕೆ ಪಾಕ್ ಚಿತ್

0
PC: BCCI

ದುಬೈ, ಸೆಪ್ಟೆಂಬರ್ 23: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ(111*) ಮತ್ತು ಶಿಖರ್ ಧವನ್(114) ಅವರ ದಾಖಲೆಯ ಜೊತೆಯಾಟಕ್ಕೆ ಪಾಕಿಸ್ತಾನ ತಂಡ ಚಿತ್ ಆಗಿದೆ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ತನ್ನ 2ನೇ ಪಂದ್ಯದದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 9 ವಿಕೆಟ್‌ಗಳಿಂದ ಬಗ್ಗು ಬಡಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಭಾರತೀಯರ ಸಂಘಟಿತ ದಾಳಿಗೆ ತತ್ತರಿಸಿ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 237 ರನ್ ಗಳಿಸಲಷ್ಟೇ ಶಕ್ತವಾಯಿತು.

PC: BCCI

ನಂತರ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 39.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಒಪ್ಪಿಸಿ 238 ರನ್ ಗಳಿಸುವ ಮೂಲಕ ಏಕಪಕ್ಷೀಯ ಗೆಲುವು ದಾಖಲಿಸಿತು. ಅಲ್ಲದೆ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿತು.
ಆಕರ್ಷಕ ಶತಕಗಳನ್ನು ಬಾರಿಸಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 201 ರನ್ ಸೇರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ 13ನೇ ಬಾರಿ ಶತಕದ ಜೊತೆಯಾಟವಾಡಿದರು. ಈ ಮೂಲಕ ಸಚಿನ್ ತೆಂಡೂಲ್ಕರ್-ವೀರೇಂದ್ರ ಸೆಹ್ವಾಗ್ ಜೋಡಿಯ 13 ಶತಕದ ಜೊತೆಯಾಟದ ದಾಖಲೆಯನ್ನು ಮುರಿದರು. ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಅತಿ ಹೆಚ್ಚು ಶತಕದ ಜೊತೆಯಾಟವಾಡಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ಹೆಸರಲ್ಲಿದೆ. ಈ ಜೋಡಿ 21 ಬಾರಿ ಶತಕದ ಜೊತೆಯಾಟವಾಡಿದೆ.
ದಾಖಲೆಯ ಜೊತೆಯಾಟದಲ್ಲಿ ರೋಹಿತ್ ಶರ್ಮಾ ವೃತ್ತಿಜೀವನದ 19ನೇ ಏಕದಿನ ಶತಕ ಬಾರಿಸಿದರೆ, ಶಿಖರ್ 15ನೇ ಶತಕ ಸಿಡಿಸಿದರು. ಅಲ್ಲದೆ ಏಷ್ಯಾ ಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ತಲಾ 2 ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಶಿಖರ್ ಬರೆದರು.
ತಮ್ಮ ಶತಕದ ಇನ್ನಿಂಗ್ಸ್ ವೇಳೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ಗಳನ್ನು ಪೂರ್ತಿಗೊಳಿಸಿದರು. ತಮ್ಮ 181ನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಈ ಸಾಧನೆ ಮಾಡಿದರು.

Brief scores
Pakistan: 237/7 in 50 overs (Shoaib Malik 78, Sarfaraz Ahmed 44, Asif Ali 30; Jaspreet Bumrah 2/29, Yuzvendra Chahal 2/46, Kuldeep Yadav 2/41) lost to India: 238/1 in 39.3 overs (Rohit Sharma 111 not out, Shikhar Dhawan 114, Ambati Rayudu 12 not out) by 9 wickets.

LEAVE A REPLY

Please enter your comment!
Please enter your name here

16 − twelve =