ಏಷ್ಯಾ ಕಪ್: ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜೈಪುರದ ಕಾಂಪೌಂಡರ್‌ನ ಪುತ್ರ

0
PC: BCCI/Twitter

ಬೈ, ಸೆಪ್ಟೆಂಬರ್ 18 : ಜೈಪುರದ ಟೊಂಕ್ ಎಂಬ ನಗರದ ಕ್ಲಿನಿಕ್ ಒಂದರಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಪುತ್ರ ಇಂದು ಭಾರತ ತಂಡದ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾನೆ. ರಾಜಸ್ಥಾನದ 20 ವರ್ಷದ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಭಾರತದ 222ನೇ ಆಟಗಾರನಾಗಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದಾರೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಹಾಂಕಾಂಗ್ ವಿರುದ್ಧದ ಪಂದ್ಯದ ಮೂಲಕ ಖಲೀಲ್ ಅಹ್ಮದ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ನಾಯಕ ರೋಹಿತ್ ಶರ್ಮಾ, ಯುವ ವೇಗದ ಬೌಲರ್‌ಗೆ ಏಕದಿನ ಕ್ಯಾಪ್ ನೀಡಿದರು.

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಭಾರತ ತಂಡದ ಆಟಗಾರ ಖಲೀಲ್ ಅಹ್ಮದ್, ಮೊದಲ ಬಾರಿ ಬಾರಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.
ದಿಗ್ಗಜ ಎಡಗೈ ವೇಗಿ ಜಹೀರ್ ಖಾನ್ ಅವರ ನಿವೃತ್ತಿಯ ನಂತರ ಭಾರತ ತಂಡ ಎಡಗೈ ವೇಗದ ಬೌಲರ್ ಕೊರತೆ ಎದುರಿಸುತ್ತಿದೆ. ಹೀಗಾಗಿ ಬಿಸಿಸಿಐನ ಆಯ್ಕೆ ಸಮಿತಿ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಯುವ ಎಡಗೈ ವೇಗಿಗಳ ಮೇಲೆ ಕಣ್ಣಿಟ್ಟಿತ್ತು. ವಿವಿಧ ವಯೋಮಿತಿಯ ಕ್ರಿಕೆಟ್‌ನಲ್ಲಿ ಹಾಗೂ ದೇಶೀಯ ಟೂರ್ನಿಗಳಲ್ಲಿ ತಮ್ಮ ಉತ್ತಮ ವೇಗದ ದಾಳಿಯಿಂದ ಮಿಂಚಿರುವ ಖಲೀಲ್ ಅಹ್ಮದ್ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

PC: Twitter

9 ವರ್ಷದೊಳಗಿನವರ ಭಾರತ ತಂಡದಲ್ಲಿ ಹಾಗೂ ಭಾರತ ‘ಎ’ ತಂಡಗಳಲ್ಲಿ ಕಾಣಿಸಿಕೊಂಡಿರುವ ಖಲೀಲ್ ಅಹ್ಮದ್ ಈ ತಂಡಗಳ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ್ದಾರೆ. ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುತ್ತಿದ್ದ ಖಲೀಲ್, ನಂತರ ರಾಜಸ್ಥಾನದ 16 ಮತ್ತು 19 ವರ್ಷದೊಳಗಿನವರ ತಂಡದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಭಾರತದ 19 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿದ್ದರು.

2018ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಖಲೀಲ್ ಅಹ್ಮದ್ 10 ಪಂದ್ಯಗಳಿಂದ 6.77ರ ಎಕಾನಮಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ಆ ಟೂರ್ನಿಯಲ್ಲಿ ಗಂಟೆಗೆ 148 ಕಿ.ಮೀ ವೇಗದಲ್ಲಿ ಎಸೆತವೊಂದನ್ನು ಎಸೆದಿದ್ದರು. ಕಳೆದ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 3 ಕೋಟಿ ರೂ.ಗಳಿಗೆ ಖಲೀಲ್ ಅಹ್ಮದ್ ಅವರನ್ನು ಖರೀದಿಸಿತ್ತು. ಭಾರತ ‘ಎ’ ತಂಡದ ಪರ 9 ಪಂದ್ಯಗಳಿಂದ 15 ವಿಕೆಟ್ಗ್‌ಳನ್ನು ಪಡೆದಿದ್ದರು.

LEAVE A REPLY

Please enter your comment!
Please enter your name here

five × 4 =