ಏಷ್ಯಾ ಕಪ್: ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿದ ತಮೀಮ್ ಇಕ್ಬಾಲ್!

0

ದುಬೈ, ಸೆಪ್ಟೆಂಬರ್ 15: ಬಾಂಗ್ಲಾದೇಶ ತಂಡದ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್, ಏಷ್ಯಾ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗಾಯದ ಕಾರಣ ಒಂದೇ ಕೈಯಲ್ಲಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಏಷ್ಯಾ ಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮೀಮ್ ಇಕ್ಬಾಲ್ ಈ ಸಾಹಸ ಮೆರೆದಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ತಮೀಮ್ ಅವರ ಎಡ ಮೊಣಕೈಗೆ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಲಂಕಾ ವೇಗಿ ಸುರಂಗ ಲಕ್ಮಲ್ ಎಸೆದ ಚೆಂಡು ಬಡಿದು ಕ್ರೀಸ್ ತೊರೆದಿದ್ದರು. ನಂತರ ತಮೀಮ್ ಅವರ ಗಾಯಕ್ಕೆ ಚಿಕಿತ್ಸೆ ನೀಡಿದ ವೈದ್ಯರು, ಇನ್ನು 6 ವಾರಗಳ ಕಾಲ ತಮೀಮ್ ಆಡುವಂತಿಲ್ಲ ಎಂದು ಸೂಚನೆ ನೀಡಿದ್ದರು.
ಆದರೆ ವೈದ್ಯರ ಸೂಚನೆಯನ್ನು ಧಿಕ್ಕರಿಸಿದ ತಮೀಮ್, 9ನೇ ವಿಕೆಟ್ ಪತನದ ನಂತರ ಮತ್ತೆ ಕ್ರೀಸ್‌ಗಿಳಿದು ಕೊನೆಯ ವಿಕೆಟ್‌ಗೆ ಶತಕವೀರ ಮುಷಿಕರ್ ರಹೀಂ ಅವರೊಂದಿಗೆ 32 ರನ್‌ಗಳ ಜೊತೆಯಾಟವಾಡಿ ಕ್ರಿಕೆಟ್ ಪ್ರಿಯರ ಮನ ಗೆದ್ದರು.
ಗಾಯದ ಕಾರಣ ತಮೀಮ್ ಇಕ್ಬಾಲ್ ಏಷ್ಯಾ ಕಪ್‌ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here

fourteen + 5 =