ಏಷ್ಯಾ ಕಪ್: ಕರ್ನಾಟಕದ ಯುವ ವೇಗಿ ಪ್ರಸಿದ್ಧ್ ಕೃಷ್ಣಗೆ ಬಿಸಿಸಿಐ ಬುಲಾವ್

0
PC: Prasidh Krishna/Facebook

ಬೆಂಗಳೂರು, ಸೆಪ್ಟೆಂಬರ್ 15: ದೇಶೀಯ ಕ್ರಿಕೆಟ್ ಹಾಗೂ ಭಾರತ ‘ಎ’, ‘ಬಿ’ ತಂಡಗಳ ಪರ ಅಮೋಘ ಪ್ರದರ್ಶನ ತೋರಿರುವ ಕರ್ನಾಟಕದ ಯುವ ಬಲಗೈ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರನ್ನು ಏಷ್ಯಾ ಕಪ್‌ನಲ್ಲಿ ಆಡಲಿರುವ ಭಾರತ ತಂಡಕ್ಕೆ ನೆರವಾಗಲು ಬಿಸಿಸಿಐ ದುಬೈಗೆ ಕಳುಹಿಸಿದೆ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಶನಿವಾರ ಆರಂಭವಾಗಲಿದ್ದು, ನೆಟ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಲು ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಸಿದ್ಧಾರ್ಥ್ ಕೌಲ್, ಮಯಾಂಕ್ ಮಾರ್ಕಂಡೆ ಹಾಗೂ ಶಹಬಾಜ್ ನದೀಮ್ ಅವರನ್ನು ದುಬೈಗೆ ಕಳುಹಿಸಲಾಗಿದೆ. ಈ ಮೂವರು ಬೌಲರ್‌ಗಳು ಮುಂದಿನ ಮೂರು ದಿನಗಳ ಕಾಲ ಭಾರತ ತಂಡದ ಅಭ್ಯಾಸಕ್ಕೆ ನೆರವಾಗಲಿದ್ದಾರೆ. ನಂತರ ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ.
22 ವರ್ಷದ ಪ್ರಸಿದ್ಧ್ ಕೃಷ್ಣ 2 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು 8 ವಿಕೆಟ್ಸ್ ಪಡೆದಿದ್ದಾರೆ. ಅಲ್ಲದೆ 27 ಲಿಸ್ಟ್ ಎ ಪಂದ್ಯಗಳಿಂದ 45 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಮ್ಮ ಮಿಂಚಿನ ದಾಳಿಯಿಂದ ಗಮನ ಸೆಳೆದಿದ್ದರು.
ಸೆಪ್ಟೆಂಬರ್ 18ರಂದು ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

three × 5 =