ಏಷ್ಯಾ ಕಪ್: ಭಾರತದ ಸೇಡಿನ ಸರ್ಜಿಕಲ್ ಸ್ಟ್ರೈಕ್‌ಗೆ ಪಾಕ್ ಉಡೀಸ್

0
PC: BCCI/Twitter

ದುಬೈ, ಸೆಪ್ಟೆಂಬರ್ 19: ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಸರ್ಜಿಕಲ್ ಸ್ಟ್ರೈಕ್‌ಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ತತ್ತರಿಸಿ ಹೋಗಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಇನ್ನೂ 126 ಎಸೆತಗಳು ಬಾಕಿ ಇರುತ್ತಲೇ 8 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು.
ಇದರೊಂದಿಗೆ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಂತಾಗಿದೆ.

PC: BCCI/Twitter

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 43.1 ಓವರ್‌ಗಳಲ್ಲಿ ಕೇವಲ 162 ರನ್‌ಗಳಿಗೆ ಆಲೌಟಾಯಿತು. ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ ಪಾಕ್ ಆರಂಭಿಕರಾದ ಖಾರ್ ಜಮಾನ್(2) ಮತ್ತು ಇಮಾಮ್ ಉಲ್ ಹಕ್(0) ಅವರನ್ನು ಪೆವಿಲಿಯನ್‌ಗಟ್ಟಿ ಪಾಕ್‌ಗೆ ಆಘಾತ ನೀಡಿದರು.
ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಕೇದಾರ್ ಜಾಧವ್, ಪಾಕ್‌ಗೆ ಹೊಡೆತ ನೀಡಿದರು. ಅಮೋಘ ಬೌಲಿಂಗ್ ಪ್ರದರ್ಶಿಸಿದ ಭುವಿ 7 ಓವರ್‌ಗಳಲ್ಲಿ 15 ರನ್ನಿತ್ತು 3 ವಿಕೆಟ್ ಪಡೆದರೆ, ಜಾಧವ್ 9 ಓವರ್‌ಗಳಲ್ಲಿ ಕೇವಲ 23 ರನ್ನಿತ್ತು 3 ವಿಕೆಟ್‌ಗಳನ್ನು ಉರುಳಿಸಿದರು.
ಬಳಿಕ 163 ರನ್‌ಗಳ ಸುಲಭ ಜಯ ಬೆನ್ನಟ್ಟಿದ ಭಾರತ ತಂಡ, 29 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮಾ

PC: BCCI/Twitter

ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 86 ರನ್ ಸೇರಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. ಬಿರುಸಿನ ಆಟವಾಡಿದ ರೋಹಿತ್ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 52 ರನ್ ಸಿಡಿಸಿದರೆ, ಮೊದಲ ಪಂದ್ಯದ ಶತಕವೀರ ಶಿಖರ್ ಧವನ್ 54 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 46 ರನ್ ಗಳಿಸಿ ಔಟಾದರು.
ನಂತರ ಜೊತೆಗೂಡಿದ ಅಂಬಾಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ತಲಾ 31 ರನ್‌ಗಳೊಂದಿಗೆ ಅಜೇಯರಾಗುಳಿದು ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.

Brief scores
Pakistan: 162 all out in 43.1 overs (Babar Azam 47, Shoaib Malik 43, Faheem Ashraf 21; Bhuvaneshwar Kumar 3/15, Kedar Jadhav 3/23, Jaspreet Bumrah 2/23, Kuldeep Yadav 1/37).
India: 164/2 in 29 overs (Rohit Sharma 52, Shikhar Dhawan 46, Ambati Rayudu 31 not out, Dinesh Karthik 31 not out; Shadab Khan 1/6, Faheem Ashraf 1/31).

LEAVE A REPLY

Please enter your comment!
Please enter your name here

five + seventeen =