ಏಷ್ಯಾ ಕಪ್: ಭಾರತ ಶುಭಾರಂಭ, ಹೋರಾಡಿ ಸೋತ ಹಾಂಕಾಂಗ್

0
PC: ICC/twitter

ದುಬೈ, ಸೆಪ್ಟೆಂಬರ್ 18: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ 6 ಬಾರಿಯ ಚಾಂಪಿಯನ್ಸ್ ಭಾರತ ತಂಡ, ಹಾಂಕಾಂಗ್ ತಂಡವನ್ನು 26 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಓಪನರ್ ಶಿಖರ್ ಧವನ್(127 ರನ್, 120 ಎಸೆತ) ಅವರ 14ನೇ ಏಕದಿನ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 285 ರನ್ ಕಲೆ ಹಾಕಿತು.
ನಂತರ ಗುರಿ ಬೆನ್ನಟ್ಟಿದ ಹಾಂಕಾಂಗ್ 50 ಓವರ್‌ಗಳಲ್ಲಿ 8ವಿಕೆಟ್‌ಗೆ 259 ರನ್ ಗಳಿಸಿ ವೀರೋಚಿತ ಸೋಲು ಅನುಭವಿಸಿತು. ಓಪನರ್‌ಗಳಾದ ನಿಜಾಕತ್ ಖಾನ್(92) ಮತ್ತು ನಾಯಕ ಅನ್ಶುಮಾನ್ ರಾಥ್(73) ಮೊದಲ ವಿಕೆಟ್‌ಗೆ ಅಮೋಘ 174 ರನ್‌ಗಳ ಜೊತೆಯಾಟವಾಡಿ ಹಾಂಕಾಂಗ್ ಪಾಳೆಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಇವರಿಬ್ಬರು ಔಟಾಗುವುದರೊಂದಿಗೆ ಹಾಂಕಾಂಗ್‌ನ ಜಯದ ಆಸೆ ಕಮರಿತು.
ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ, ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Brief scoresIndia: 285/7 in 50 overs (Shikhar Dhawan 127, Ambati Rayudu 60, Dinesh Karthik 33, Kedar Jadhav 28 not out; Kinchit Shah 3/39, Ehsan Khan 2/65).
Hong Kong: 259/8 in 50 overs (Nizakat Khan 92, Anshuman Rath 73; Khaleel Ahmed 3/48, Yuzvendra Chahal 3/46, Kuldeep Yadav 2/42).

PC: ICC/twitter

LEAVE A REPLY

Please enter your comment!
Please enter your name here

1 × 2 =