ಏಷ್ಯಾ ಕಪ್ ಸೂಪರ್ 4: ಬಾಂಗ್ಲಾ ಬಗ್ಗು ಬಡಿದ ಭಾರತ

0
India's Ravindra Jadeja celebrates with team-mates after taking a Bangladesh wicket. PC: BCCI

ದುಬೈ, ಸೆಪ್ಟೆಂಬರ್ 21: 14 ತಿಂಗಳುಗಳ ನಂತರ ಏಕದಿನ ತಂಡಕ್ಕೆ ಕಂಬ್ಯಾಕ್ ಮಾಡಿದ ರವೀಂದ್ರ ಜಡೇಜಾ(4/29) ಅವರ ಮಾರಕ ಬೌಲಿಂಗ್ ಹಾಗೂ ನಾಯಕ ರೋಹಿತ್ ಶರ್ಮಾ(ಅಜೇಯ 83) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ, ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, 49.1 ಓವರ್‌ಗಳಲ್ಲಿ 173 ರನ್‌ಗಳಿಗೆ ಆಲೌಟಾಯಿತು. ಅಮೋಘ ಬೌಲಿಂಗ್ ಪ್ರದರ್ಶನವಿತ್ತ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ, 10 ಓವರ್‌ಗಳಲ್ಲಿ ಕೇವಲ 29 ರನ್ನಿತ್ತು 4 ವಿಕೆಟ್ ಉರುಳಿಸಿದರು.
ನಂತರ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, 36.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆಲುವು ದಾಖಲಿಸಿತು. ನಾಯಕ ರೋಹಿತ್ 104 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳ ಸಹಿತ ಅಜೇಯ 83 ರನ್ ಗಳಿಸಿದರೆ, ಮಾಜಿ ನಾಯಕ ಎಂ.ಎಸ್ ಧೋನಿ 33 ಮತ್ತು ಶಿಖರ್ ಧವನ್ 40 ರನ್ ಗಳಿಸಿದರು.

Brief scores: Bangladesh: 173 all out in 49.1 overs (Mehidy Hasan 42, Mashrafe Mortaza 26, Mahmudullah 25, Ravindra Jadeja 4/29, Jasprit Bumrah 3/37, Bhuvneshwar Kumar 3/32) lost to India: 174/3 in 36.2 overs (Rohit Sharma 83 not out, Shikhar Dhawan 33, MS Dhoni 33) by 7 wickets.

LEAVE A REPLY

Please enter your comment!
Please enter your name here

nineteen − 8 =