ಐಪಿಎಲ್ ಟ್ರೇಡ್ ವಿಂಡೊ: RCBಗೆ ಸ್ಟೋಯ್ನಿಸ್, KINGS XIಗೆ ಮನ್ದೀಪ್

0

ಬೆಂಗಳೂರು, ಅಕ್ಟೋಬರ್ 29: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮನ್ ದೀಪ್ ಸಿಂಗ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತವರು ತಂಡವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದ್ದಾರೆ.

ಮುಂಬರುವ ಐಪಿಎಲ್ ನ ಮೊದಲ ಟ್ರೇಡ್ ವಿಂಡೋನಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿಗಳು ಇಬ್ಬರು ಆಟಗಾರರನ್ನು ಅದಲು ಬದಲು ಮಾಡಿಕೊಂಡಿವೆ. ಇದರಂತೆ ಕಿಂಗ್ಸ್ ಇಲೆವೆನ್ ತಂಡದಲ್ಲಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ತನ್ನ ತಂಡಕ್ಕೆ ಸೇರಿಸಿಕೊಂಡರೆ, ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದ ಮನ್ದೀಪ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿದ್ದಾರೆ.

ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ ಸ್ಟೋಯ್ನಿಸ್ ಅವರಿಗೆ ಆರ್ ಸಿ ಬಿ ತಂಡ 6.20 ಕೋಟಿ ರೂ. ಬಿಡ್ ಮಾಡಿತ್ತು. ಆದರೆ ರೈಟ್ ಟು ಮ್ಯಾಚ್ ನಿಯಮದ ಪ್ರಕಾರ ಸ್ಟೋಯ್ನಿಸ್ ಅವರನ್ನು ಕಿಂಗ್ಸ್ ಇಲೆವೆನ್ ತನ್ನಲ್ಲೇ ಉಳಿಸಿಕೊಂಡಿತ್ತು. ಮನ್ದೀಪ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ 1.40 ಕೋಟಿ ಮೊತ್ತಕ್ಕೆ ಖರೀದಿಸಿತ್ತು.

ರಾಯಲ್ ಚಾಲೆಂಜರ್ಸ್ ಪರ ಮನ್ದೀಪ್ ಸಿಂಗ್ 40 ಪಂದ್ಯಗಳನ್ನಾಡಿದ್ದು, 128.94ರ ಸ್ಟ್ರೈಕ್ ರೇಟ್ ನಲ್ಲಿ 597 ರನ್ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

ten + 14 =