ಐಸಿಎಸ್‌ಸಿ ಹಾಕಿ: ಕೊಡಗಿನ ಕರುಂಬಯ್ಯ ಅಕಾಡೆಮಿ ತಂಡ ಚಾಂಪಿಯನ್ಸ್

0

ಕೊಡಗು, ಸೆಪ್ಟೆಂಬರ್ 4: ಖ್ಯಾತ ಅಂತರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಒಡೆತನದ ಕರುಂಬಯ್ಯ ಅಕಾಡೆಮಿ ಫಾರ್ ಲರ್ನಿಂಗ್ ಆ್ಯಂಡ್ ಸ್ಪೋರ್ಟ್ಸ್(ಕೆಎಎಲ್‌ಎಸ್) ಶಾಲೆ, ಕೊಡಗು ತಂಡ 17 ವರ್ಷದೊಳಗಿನವರ ರಾಜ್ಯ ಐಸಿಎಸ್‌ಸಿ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ 6ನೇ ವರ್ಷವೂ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಬೆಂಗಳೂರು ಮತ್ತು ಕೊಡಗಿನ ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಸಿಒಪಿಎಸ್ ತಂಡ ದ್ವಿತೀಯ ಸ್ಥಾನ ಪಡೆದರೆ, ಬಾಲ್‌ಡ್ವಿನ್ ಬಾಲಕರ ಶಾಲಾ ತಂಡ 3ನೇ ಸ್ಥಾನ ಪಡೆಯಿತು. ಚಾಂಪಿಯನ್ ಕೆಎಎಲ್‌ಎಸ್ ತಂಡ ಒಡಿಶಾದಲ್ಲಿ ಸೆಪ್ಟೆಂಬರ್ 13ರಿಂದ 17ರವರೆಗೆ ನಡೆಯಲಿರುವ ಅಖಿಲ ಭಾರತ ಐಸಿಎಸ್‌ಸಿ ಹಾಕಿ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದೆ.

LEAVE A REPLY

Please enter your comment!
Please enter your name here

two − 1 =