ಒಬ್ಬೊಬ್ಬರಿಗೆ ಒಂದೊಂದು ರೂಲ್ಸ್! ಮಯಾಂಕ್ ವಿಚಾರದಲ್ಲಿ ಸಿಡಿದೆದ್ದ ಟರ್ಬನೇಟರ್

0
PC: Twitter
ಬೆಂಗಳೂರು, ಸೆಪ್ಟೆಂಬರ್ 6: ದೇಶೀಯ ಕ್ರಿಕೆಟ್ ಹಾಗೂ ಭಾರತ ಎ ತಂಡಗಳ ಪರ ರನ್ ಹೊಳೆಯನ್ನೇ ಹರಿಸಿ ಕಳೆದ 10 ತಿಂಗಳಲ್ಲಿ 13 ಶತಕಗಳ ಸಹಿತ 3 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರೂ, ಬಿಸಿಸಿಐನ ಆಯ್ಕೆ ಸಮಿತಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ವಿಚಾರದಲ್ಲಿ ಏಕೋ ಕಣ್ಣಿದ್ದೂ ಕುರುಡಾಗಿದೆ.
ಮಯಾಂಕ್ ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಟೀಮ್ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ , ಟರ್ಬನೇಟರ್ ಹರ್ಭಜನ್ ಸಿಂಗ್ ಕಿಡಿ ಕಾರಿದ್ದಾರೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಮಯಾಂಕ್‌ಗೆ ಸ್ಥಾನ ನೀಡದೆ ಇರುವ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯ ವಿರುದ್ಧ ಭಜ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಷ್ಯಾ ಕಪ್‌ಗೆ ಆಯ್ಕೆ ಮಾಡಲಾಗಿರುವ ತಂಡವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಹರ್ಭಜನ್ ಸಿಂಗ್, ಈ ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಎಲ್ಲಿ ಮಯಾಂಕ್ ಅಗರ್ವಾಲ್? ಸಾಕಷ್ಟು ರನ್‌ಗಳನ್ನು ಗಳಿಸಿದ್ದರೂ ಈ ತಂಡದಲ್ಲಿ ಮಯಾಂಕ್ ಹೆಸರು ಕಾಣಿಸುತ್ತಿಲ್ಲ. ನನ್ನ ಪ್ರಕಾರ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ.
– ಹರ್ಭಜನ್ ಸಿಂಗ್, ಮಾಜಿ ಕ್ರಿಕೆಟಿಗ.

2017-18ನೇ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ 8 ಶತಕಗಳ ಸಹಿತ ದಾಖಲೆಯ 2141 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ತಮ್ಮ ಶ್ರೇಷ್ಠ ಫಾರ್ಮನ್ನು ಈ ವರ್ಷವೂ ಮುಂದುವರಿಸಿದ್ದಾರೆ. ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ 3 ಶತಕಗಳನ್ನು ಬಾರಿಸಿದ್ದ ಮಯಾಂಕ್, ದಕ್ಷಿಣ ಆಫ್ರಿಕಾ ಎ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಅಲ್ಲದೆ ಚತುಷ್ಕೋನ ಕ್ರಿಕೆಟ್ ಸರಣಿಯಲ್ಲೂ ಭಾರತ ಬಿ ತಂಡದ ಪರ ಶತಕ ದಾಖಲಿಸಿದ್ದರು. ಹೀಗೆ ಕಳೆದ 10 ತಿಂಗಳುಗಳಿಂದ ಮಯಾಂಕ್ 13 ಶತಕಗಳನ್ನು ಸಿಡಿಸಿ ತಮ್ಮನ್ನು ಕಡೆಗಣಿಸುತ್ತಿರುವ ಆಯ್ಕೆ ಸಮಿತಿಯ ಸದಸ್ಯರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಲೇ ಬಂದಿದ್ದಾರೆ.

LEAVE A REPLY

Please enter your comment!
Please enter your name here

twenty + 14 =