ಕನ್ನಡತಿ ವೇದಾ ಕೃಷ್ಣಮೂರ್ತಿಗೆ ಜನ್ಮದಿನದ ಸಂಭ್ರಮ

0
PC: Veda Krishnamurthy/Facebook
ಬೆಂಗಳೂರು, ಅಕ್ಟೋಬರ್ 16: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಮಂಗಳವಾರ 26ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಭಾರತ ಪರ 48 ಏಕದಿನ ಪಂದ್ಯಗಳನ್ನಾಡಿರುವ ಚಿಕ್ಕಮಗಳೂರಿನ ಕಡೂರಿನವರಾದ ವೇದಾ, 829 ರನ್ ಗಳಿಸಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ವೇದಾ ಕೇವಲ 45 ಎಸೆತಗಳಲ್ಲಿ ಗಳಿಸಿದ್ದ 70 ರನ್ ಗಳ ನೆರವಿನಿಂದ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. 53 ಟಿ20 ಪಂದ್ಯಗಳನ್ನೂ ಆಡಿರುವ ವೇದಾ 647 ರನ್ ಕಲೆ ಹಾಕಿದ್ದಾರೆ. ನವೆಂಬರ್ 9ರಿಂದ ವೆಸ್ಟ್ ಇಂಡೀಸ್ ನಲ್ಲಿ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಆಡಲಿರುವ ಭಾರತ ತಂಡದಲ್ಲಿ ವೇದಾ ಸ್ಥಾನ ಪಡೆದಿದ್ದಾರೆ.
ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರ್ತಿಯಾಗಿರುವ ವೇದಾ ಕೃಷ್ಣಮೂರ್ತಿ ಅದ್ಭುತ ಫೀಲ್ಡರ್ ಕೂಡ ಹೌದು.

LEAVE A REPLY

Please enter your comment!
Please enter your name here

three − one =