ಕನ್ನಡಿಗರ ಕಮಾಲ್: ಭಾರತ ‘ಎ’ ಮತ್ತು ‘ಬಿ’ ತಂಡಗಳಿಗೆ ಜಯ

0

ಬೆಂಗಳೂರು: ಕರ್ನಾಟಕದ ಆಟಗಾರರಾದ ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್, ಮನೀಶ್ ಪಾಂಡೆ ಮತ್ತು ಕೆ.ಗೌತಮ್ ಅವರ ಅಮೋಘ ಆಟದಿಂದಾಗಿ ಭಾರತ ‘ಎ’ ಹಾಗೂ ಭಾರತ ‘ಬಿ’ ತಂಡಗಳು ಚಕುಷ್ಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ವಿರುದ್ಧ ಭರ್ಜರಿ ಜಯ ದಾಖಲಿಸಿವೆ.
ಬೆಂಗಳೂರಿನ ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಥ ಭಾರತ ‘ಬಿ’ ತಂಡದ ವೇಗಿ ಪ್ರಸಿದ್ಥ್ ಕೃಷ್ಣ(4/49) ಮತ್ತು ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್(3/42) ಬೌಲಿಂಗ್ ನಲ್ಲಿ ಮಿಂಚಿದರೆ, ನಾಯಕ ಮನೀಶ್ ಪಾಂಡೆ ಅಜೇಯ 95 ರನ್ ಬಾರಿಸಿದರು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ ‘ಬಿ’ ತಂಡ 30 ರನ್ ಗಳಿಂದ ಪಂದ್ಯ ಗೆದ್ದಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ‘ಎ’ ಪರ ಆಡಿದ ಕೆ.ಗೌತಮ್(3/31) ಮೂರು ವಿಕೆಟ್ ಪಡೆದು ಆಸ್ಟ್ರೇಲಿಯಾ ‘ಎ’ ವಿರುದ್ಧ ಗೆಲುವಿಗೆ ಕಾರಣರಾದರು.

Brief score
Australia A: 151 all out in 31.4 overs (Travis Head 28, Ashton Agar 34; Mohammad Siraj 4/68, K Gowtham 3/31).
India A: 152/5 in 38.3 overs (Ambati Rayudu 62 not out, Krunal Pandya 49; Richardson 3/27).

South Africa A: 231 all out in 47.3 overs (Farhan Behardien 43, Senuran Muthusami 55; Prasidh Krishna 4/49, Shreyas Gopal 3/42).
India A Won by 5 Wickets

India B: 214/5 in 40.3 overs (Shubhman Gill 42, Manish Pandey 95 not out; Dane Paterson 2/33).
India B Won by 30 Runs (D/L Method)

LEAVE A REPLY

Please enter your comment!
Please enter your name here

18 − 1 =