ಕಬಡ್ಡಿ: ಜಿಎಫ್‌ಜಿಸಿ ಮಾಲೂರು ತಂಡಕ್ಕೆ ರೆಡ್ ಬುಲ್ ಟ್ರೋಫಿ

0
GFGC Malur, winners of the Red Bull Tashan 2018 southern edition.

ಬೆಂಗಳೂರು, ಅಕ್ಟೋಬರ್ 1: ಜಿಎಫ್‌ಜಿಸಿ ಮಾಲೂರು ತಂಡ, ರೆಡ್ ಬುಲ್ ತಶಾನ್ ಕಬಡ್ಡಿ ಟೂರ್ನಿಯ ದಕ್ಷಿಣ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ.
ಇಲ್ಲಿನ ಪ್ಲೇ ಅರೆನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜಿಎಫ್‌ಜಿಸಿ ಮಾಲೂರು ತಂಡ ಹಾಲಿ ಚಾಂಪಿಯನ್ಸ್ ಜಿಎಫ್‌ಜಿಸಿ ನೆಲಮಂಗಲ ತಂಡವನ್ನು 33-30 ಅಂಕಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಟೂರ್ನಿಯಲ್ಲಿ ಕ್ಲಬ್, ಕಾಲೇಜು ತಂಡಗಳ ಸಹಿತ ಒಟ್ಟು 32 ತಂಡಗಳು ಭಾಗವಹಿಸಿದ್ದವು.
ಟೂರ್ನಿಯ ಅಗ್ರ ನಾಲ್ಕು ತಂಡಗಳಾದ ಜಿಎಫ್‌ಜಿಸಿ ಮಾಲೂರು, ಜಿಎಫ್‌ಜಿಸಿ ನೆಲಮಂಗಲ, ಆರ್‌ಸಿ ಕಾಲೇಜು ಮತ್ತು ಎಸ್‌ಎಲ್‌ಎನ್ ಡಿಗ್ರಿ ಕಾಲೇಜು ತಂಡಗಳು ಪ್ರೊ ಕಬಡ್ಡಿ ಲೀಗ್‌ನ ಬೆಂಗಳೂರು ಬುಲ್ಸ್ ತಂಡದ ಜೊತೆ ತರಬೇತಿ ಪಡೆಯುವ ಅವಕಾಶ ಗಳಿಸಿವೆ.

LEAVE A REPLY

Please enter your comment!
Please enter your name here

four + 20 =