ಕರ್ನಾಟಕದ ಅಂಡರ್-23 ಮಹಿಳಾ ತಂಡಕ್ಕೆ ದಿವ್ಯಾ ನಾಯಕಿ

0

ಬೆಂಗಳೂರು, ಜನವರಿ 14: ಬಿಸಿಸಿಐ ಅಂಡರ್-23 ಟೂರ್ನಿಗೆ ಕರ್ನಾಟಕದ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ದಿವ್ಯಾ ಜ್ಞಾನಾನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸಿ.ಪ್ರತ್ಯೂಷಾ ಉಪನಾಯಕಿ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಈ ಟೂರ್ನಿ ಜನವರಿ 15ರಿಂದ 24ರವರೆಗೆ ಗುಜರಾತ್ ನಲ್ಲಿ ನಡೆಯಲಿದೆ.

ಕರ್ನಾಟಕ ತಂಡ: ದಿವ್ಯಾ ಜ್ಞಾನಾನಂದ್(ನಾಯಕಿ), ಪ್ರತ್ಯೂಷಾ(ಉಪ ನಾಯಕಿ), ಶುಭಾ ಸತೀಶ್, ಸಂಜನಾ ಬಟ್ನಿ(ವಿಕೆಟ್ ಕೀಪರ್), ಮೋನಿಕಾ ಸಿ.ಪಟೇಲ್, ಸಹನಾ ಪವಾರ್, ಅದಿತಿ ರಾಜೇಶ್, ಸೌಮ್ಯಾ ಎಂ., ಪ್ರತ್ಯೂಷಾ ಕುಮಾರ್(ವಿಕೆಟ್ ಕೀಪರ್), ವೃಂದಾ ದಿನೇಶ್, ಶುಭಶ್ರೀ ನಾಯ್ಡು, ಶ್ರೇಯಾಂಕಾ ಪಾಟೀಲ್, ಧನ್ಯಾ ಗೌಡ, ಸಂಜನಾ ರಾಜ್, ಆದಿಶ್ರೀ ಚೆಂಗಪ್ಪ. ಕೋಚ್: ಮಮತಾ ಮಾಬೆನ್, ಸಹಾಯಕ ಕೋಚ್: ರಷೆಲ್ ವಿನೋದ್ ಶೆಟ್ಟಿ, ಟ್ರೈನರ್: ಶಾರದಾ ಎಸ್., ಫಿಸಿಯೊ: ಸಿಂಧು ಎನ್., ವೀಡಿಯೊ ಅನಾಲಿಸ್ಟ್: ಮಾಲಾ ರಂಗಸ್ವಾಮಿ.

LEAVE A REPLY

Please enter your comment!
Please enter your name here

four × 3 =