ಕರ್ನಾಟಕದ ಯುವ ವೇಗಿಗಳಿಗೆ ಆಸೀಸ್ ದಿಗ್ಗಜ ಮಿಚೆಲ್ ಜಾನ್ಸನ್ ಬೌಲಿಂಗ್ ಪಾಠ

0
ಮೈಸೂರು: ಆಸ್ಟ್ರೇಲಿಯಾದ ಮಾಜಿ ಎಡಗೈ ವೇಗದ ಬೌಲರ್ ಮಿಚೆಲ್ ಜಾನ್ಸನ್, ಸದ್ಯ ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್-7 ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಈ ಸಂದರ್ಭದಲ್ಲಿ ಕಾಂಗರೂ ನಾಡಿನ ದಿಗ್ಗಜ ವೇಗದ ಬೌಲರ್ ಜಾನ್ಸನ್, ಕರ್ನಾಟಕದ ಯುವ ವೇಗದ ಬೌಲರ್‌ಗಳಿಗೆ ಬೌಲಿಂಗ್ ಪಾಠ ಹೇಳಿಕೊಟ್ಟಿದ್ದಾರೆ.
ಶನಿವಾರ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಜಾನ್ಸನ್, ರಾಜ್ಯದ 12 ವೇಗದ ಬೌಲರ್‌ಗಳಿಗೆ ಬೌಲಿಂಗ್ ಟಿಪ್ಸ್ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ರಾಜ್ಯ ಹಿರಿಯರ ತಂಡದ ಆಯ್ಕೆ ಸಮಿತಿಯ ಸದಸ್ಯ, ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಉಪಸ್ಥಿತರಿದ್ದರು.
ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ 36 ವರ್ಷದ ಜಾನ್ಸನ್, ಆಸ್ಟ್ರೇಲಿಯಾ ಪರ ಆಡಿರುವ 73 ಟೆಸ್ಟ್ ಪಂದ್ಯಗಳಿಂದ 313 ವಿಕೆಟ್ಸ್, 153 ಏಕದಿನ ಪಂದ್ಯಗಳಿಂದ 239 ವಿಕೆಟ್ಸ್ ಹಾಗೂ 30 ಟಿ20 ಪಂದ್ಯಗಳಿಂದ 38 ವಿಕೆಟ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

8 + 1 =