ಕಾಂಗರೂಗಳನ್ನು ಧೂಳೀಪಟ ಮಾಡಿದ ಮೊಹಮ್ಮದ್ ಸಿರಾಜ್

0
PC: BCCI/Twitter
ಬೆಂಗಳೂರು, ಸೆಪ್ಟೆಂಬರ್ 2: ಹೈದರಾಬಾದ್‌ನ ಯುವ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 58 ರನ್ನಿತ್ತು 8 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಎ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಮೊದಲ ದಿನವೇ ಮೇಲುಗೈ ತಂದುಕೊಟ್ಟಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎ ತಂಡಕ್ಕೆ ಉಸ್ಮಾನ್ ಖವಾಜ(127) ಮತ್ತು ಕರ್ಟಿಸ್ ಪ್ಯಾಟರ್ಸನ್(30) ಮೊದಲ ವಿಕೆಟ್‌ಗೆ 78 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ನಂತರ ಮೊಹಮ್ಮದ್ ಸಿರಾಜ್ ಅವರ ಆರ್ಭಟ ಆರಂಭಗೊಂಡಿತು. ಕಾಂಗರೂಗಳ ಮೇಲೆ ಮಾರಕವಾಗಿ ಎರಗಿದ ಸಿರಾಜ್ 19.3 ಓವರ್‌ಗಳಲ್ಲಿ 59 ರನ್ನಿತ್ತು 8 ವಿಕೆಟ್ ಉಡಾಯಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲ್ಯಾಬುಶೇನ್ 60 ರನ್ ಬಾರಿಸಿದರೂ, ಸಿರಾಜ್ ದಾಳಿಗೆ ತತ್ತರಿಸಿದ ಆಸೀಸ್ 75.3 ಓವರ್‌ಗಳಲ್ಲಿ 243 ರನ್‌ಗಳಿಗೆ ಆಲೌಟಾಯಿತು. ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಭಾರತ ಎ ತಂಡ ಪ್ರಥಮ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿತ್ತು. ಸ್ಥಳೀಯ ಹೀರೊಗಳಾದ ಮಯಾಂಕ್ ಅಗರ್ವಾಲ್(ಅಜೇಯ 31) ಮತ್ತು ಆರ್.ಸಮರ್ಥ್(ಅಜೇಯ 10) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Brief score

Australia A: 243 all out in 75.3 overs (Usman Khawaja 127, Kurtis Patterson 31, Labuschagne 60; Mohammed Siraj 8/59, Kuldeep Yadav 2/63).

India A: 41/0 in 12 overs (Mayank Agarwal 31 not out, R Samarth 10 not out).

LEAVE A REPLY

Please enter your comment!
Please enter your name here

six − five =