ಕಿಂಗ್ ಫಿಷರ್ ಕಪ್: ಪ್ರೆಸ್ ಕ್ಲಬ್, ಯುಬಿಎಲ್ ತಂಡಗಳಿಗೆ ಭರ್ಜರಿ ಜಯ

0
Man of the match Vinay of Press Club of Bangalore along with Sudarshan P.

ಬೆಂಗಳೂರು, ಅಕ್ಟೋಬರ್ 29: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಯುನೈಟೆಡ್ ಬ್ರೇವರೀಸ್ ಲಿಮಿಟೆಡ್(ಯುಬಿಎಲ್) ತಂಡಗಳು 22ನೇ ಆವೃತ್ತಿಯ ಕಿಂಗ್ ಷಿಫರ್ ಕಪ್ ಇಂಟರ್ ಕಾರ್ಪೊರೇಟ್ ಟಿ20 ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿವೆ.

ನಗರದ ಹೊರವಲಯದಲ್ಲಿರುವ ಕಿನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಭಾನುವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತಂಡ ಅಮೆಟೆಕ್ ವಿರುದ್ಧ 9 ವಿಕೆಟ್ ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಮೆಟೆಕ್ ನಿಗದಿತ 15 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರೆಸ್ ಕ್ಲಬ್ ಪರ ವಿನಯ್ 2 ಓವರ್ ಗಳಲ್ಲಿ 6 ರನ್ನಿತ್ತು 3 ವಿಕೆಟ್ ಉರುಳಿಸಿದರು. ನಂತರ ಸುಲಭ ಗುರಿ ಬೆನ್ನಟ್ಟಿದ ಪ್ರೆಸ್ ಕ್ಲಬ್ ತಂಡ 5.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಜಯಭೇರಿ ಬಾರಿಸಿತು. ಪ್ರೆಸ್ ಕ್ಲಬ್ ಪರ ಸುದರ್ಶನ್ 18 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದರು.

2ನೇ ಪಂದ್ಯದಲ್ಲಿ ಯುಬಿಎಲ್ ತಂಡ ರಿಟ್ಟಲ್ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದರೆ, 3ನೇ ಪಂದ್ಯದಲ್ಲಿ ಯುಬಿಎಲ್ ತಂಡ ವಿಜಯ ಕರ್ನಾಟಕ ವಿರುದ್ಧ 44 ರನ್ ಗಳ ಭರ್ಜರಿ ಜಯ ದಾಖಲಿಸಿತು.

Brief scores: Ametek: 69 for 8 in 15 overs (Vinay 3/6) – lost to Press Club of Bangalore: 71 for 1 in 5.5 overs (Sudarshan 27 not out) by 9 wickets.

UBL: 148 for 6 in 16 overs (Bhimsen 31, Ram 22, Vasanth 2/24) bt Rittal: 84 all out in 14.4 overs (Manjunath MR 30, Subbu 5/17 (hat-trick), Arun 3/6) by 64 runs.

UBL: 135/5 in 16 overs (Anil 58, Ram 32, Baire Gowda 3/22) bt Vijay Karnataka: 91 for 6 in 16 overs (Baire Gowda 58, Ram 2/15) by 44 runs.

 

LEAVE A REPLY

Please enter your comment!
Please enter your name here

two + eight =