ಕೆಂಗಲ್ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್: ನ್ಯಾಶ್ ಕ್ರಿಕೆಟರ್ಸ್ ಚಾಂಪಿಯನ್ಸ್

0

ಬೆಂಗಳೂರು, ಫೆಬ್ರವರಿ 11: ವಿಧಾನಸೌಧದ ನಿಮಾತೃಕೆಂಗಲ್ ಹನುಮಂತಯ್ಯ ಅವರ ನೆನಪಿನಲ್ಲಿ ನಡೆದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಮೆಂಟ್ ನಲ್ಲಿ ನಾಶ್ಕ್ರಿಕೇಟರ್ಸ್ ಜಯಭೇರಿ ಬಾರಿಸಿದೆ.

ನಗರದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆದ ಈಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. 8ಓವರ್ ಗಳ ಸೀಮಿತ ಪಂದ್ಯಾವಳಿಯಲ್ಲಿ ಹೆಬ್ಬಾಳದಅಚೀವರ್ಸ್ ತಂಡ ಮೂರನೇ ಸ್ಥಾನ ಪಡೆದುಕೊಂಡು 25ಸಾವಿರ ರೂಪಾಯಿಗಳ ಬಹುಮಾನ ಪಡೆದುಕೊಂಡರೆ, ಜಯಕರ್ನಾಟಕ ತಂಡ 2 ನೇ ಸ್ಥಾನ ಪಡೆದುಕೊಂಡು 50 ಸಾವಿರರೂಪಾಯಿಗಳ ಬಹುಮಾನ ಪಡೆದುಕೊಳ್ಳುವಲ್ಲಿಯಶಸ್ವಿಯಾಯಿತು. 

ಮಾಜಿ ಕ್ರಿಕೇಟಿಗ ದೊಡ್ಡ ಗಣೇಶ್ ಬಹುಮಾನ ವಿತರಿಸಿಮಾತನಾಡಿದರು. ಪಂದ್ಯಾವಳಿಯಲ್ಲಿ ಗೆಲ್ಲುವುದಕ್ಕಿಂತಾಭಾಗವಹಿಸುವುದು ಮುಖ್ಯ. ಸ್ಪರ್ಧಾತ್ಮಕ ಮನೋಭಾವದಿಂದಆಟದಲ್ಲಿ ಭಾಗವಹಿಸುವುದು ಮುಖ್ಯ ಎಂದರು. 

ಕೆಂಗಲ್ ಹನುಂತಯ್ಯ ಮೆಮೋರಿಯಲ್ ಟ್ರಸ್ಟ್ ನಸಂಸ್ಥಾಪಕ ಅಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ಶ್ರೀ ಕೆಂಗಲ್ಶ್ರೀಪಾದ ರೇಣು ಮಾತನಾಡಿ, ರಾಜ್ಯದ ಮೊದಲ ಚುನಾಯಿತಮುಖ್ಯಮಂತ್ರಿ ಹಾಗೂ ವಿಧಾನಸೌಧ ನಿರ್ಮಾತೃ ಕೆಂಗಲ್ಹನುಮಂತಯ್ಯ ಅವರು ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿದಕೊಡುಗೆ ಅಪಾರ. ರಾಜ್ಯದ ನಿರ್ಮಾಣಕ್ಕೆ ಸುಸ್ಥಿರ ಅಡಿಪಾಯಹಾಕಿದವರು. ಅಲ್ಲದೆ, ರಾಜ್ಯದ ಹಾಗೂ ದೇಶದ ಅಭಿವೃದ್ದಿಗೆತಮ್ಮದೇ ಅದ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ. ಇಂತಹಮಹನೀಯರ ಬಗ್ಗೆ ನಮ್ಮ ಯುವ ಜನಾಂಗದಲ್ಲಿ ಅರಿವುಮೂಡಿಸುವ ದೃಷ್ಟಿಯಿಂದ “ಕೆಂಗಲ್ ಕಪ್” ಟೆನ್ನಿಸ್ ಬಾಲ್ಟೂರ್ನಮೆಂಟನ್ನು ಆಯೋಜಿಸಿದ್ದೆವು ಎಂದರು.  

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹೆಚ್ ಸಿಚಂದ್ರಶೇಖರ್, ಎನ್ ಸುರೇಶ್, ಕೆ ನರಸಿಂಗ ರಾವ್, ಎಂವಿಶ್ವನಾಥ್, ಕೆ ಎಂ ಮಂಜುನಾಥ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

9 + eight =