ಕೆಎಸ್‌ಎಫ್‌ಎ ಮಹಿಳಾ ಫುಟ್ಬಾಲ್ ಟೂರ್ನಿ : ಬಿಯುಎಫ್‌ಸಿ ತಂಡ ಚಾಂಪಿಯನ್

0

ಬೆಂಗಳೂರು, ಆಗಸ್ಟ್ 27: ಮಂಗಳೂರು ಎಫ್‌ಸಿ ತಂಡವನ್ನು ಫೈನಲ್‌ನಲ್ಲಿ 1-0 ಗೋಲುಗಳಿಂದ ಸೋಲಿಸಿದ ಆತಿಥೇಯ ಬಿಯುಎಫ್‌ಸಿ ತಂಡ, ಕೆಎಸ್‌ಎಫ್‌ಎ ಇಂಪೆಟಸ್ ಮಹಿಳಾ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ರಾಜ್ಯ ಫುಟ್ಬಾಲ್ ಸಂಸ್ಥೆ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಿಳೆಯರಿಗಾಗಿ ಈ ಟೂರ್ನಿಯನ್ನು ಆಯೋಜಿಸಿತ್ತು. ಬಿಯುಎಫ್‌ಸಿ ಪರ ಅಮೂಲ್ಯ 7ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಶಾಸಕ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎನ್.ಎ ಹ್ಯಾರಿಸ್ ಸೋಮವಾರ ಸಂಜೆ ವಿನ್ನರ್ಸ್ ಹಾಗೂ ರನ್ನರ್ಸ್ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.

LEAVE A REPLY

Please enter your comment!
Please enter your name here

16 + 8 =